ಸಿಟಿಜನ್ಸ್ ಶಿಕ್ಷಣ ಸಂಸ್ಥೆ ಪಿಯುಸಿ ಪರೀಕ್ಷೆಯಲ್ಲಿ ಮೈಸೂರು ಗ್ರಾಮಾಂತರಕ್ಕೆ ಪ್ರಥಮ ಸ್ಥಾನ
ಸಂಜೆವಾಣಿ ವಾರ್ತೆ
ನಂಜನಗೂಡು:ಏ.13: ನಗರದ ಸಿಟಿಜನ್ಸ್ ಶಿಕ್ಷಣ ಸಂಸ್ಥೆಯ 2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟವಾಗಿದ್ದು, ಸಿಟಿಜನ್ ಶಿಕ್ಷಣ ಸಂಸ್ಥೆಯು ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ನಂಜನಗೂಡು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ ರಿತಿಶಾ.ಎ ಮೂರ್ತಿ-592/600 (ಸಂಸ್ಕøತ-100, ಇಂಗ್ಲಿಷ್-93, ಭೌತಶಾಸ್ತ್ರ-99, ರಸಾಯನಶಾಸ್ತ್ರ-100, ಗಣಿತ-100, ಜೀವಶಾಸ್ತ್ರ-100), ವಾಣಿಜ್ಯ ವಿಭಾಗದಲ್ಲಿ ರಿಸೋನಾ.ಎ ಮೂರ್ತಿ-588/600 (ಸಂಸ್ಕøತ-99, ಇಂಗ್ಲಿಷ್-92, ಅರ್ಥಶಾಸ್ತ್ರ-100, ವ್ಯವಹಾರಶಾಸ್ತ್ರ-98, ಲೆಕ್ಕಶಾಸ್ತ್ರ-100, ಸಂಖ್ಯಾಶಾಸ್ತ್ರ-99) ಮತ್ತು ದೃಷ್ಟಿಕಾ-588/600 (ಹಿಂದಿ-97, ಇಂಗ್ಲಿಷ್-93, ಅರ್ಥಶಾಸ್ತ್ರ-100, ವ್ಯವಹಾರಶಾಸ್ತ್ರ-99, ಲೆಕ್ಕಶಾಸ್ತ್ರ-100, ಗಣಕಶಾಸ್ತ್ರ-99) ಮೈಸೂರು ಗ್ರಾಮಾಂತರ ಜಿಲ್ಲೆ ಮತ್ತು ನಂಜನಗೂಡು ತಾಲ್ಲೂಕಿಗೆ ಪ್ರಥಮ ಸ್ಥಾನಗಳಿಸಿ ಸಮಪಾಲು ಹಂಚಿಕೊಂಡಿದ್ದಾರೆ.
ಸಿಟಿಜನ್ ಶಿಕ್ಷಣ ಸಂಸ್ಥೆಯ 66 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಮತ್ತು 213 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.
ಈ ಸಾಧನೆಗೈದ ವಿದ್ಯಾರ್ಥಿಗಳನ್ನು ಸಿಟಿಜನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮಶೂದ ಬೇಗಂ, ಕಾರ್ಯದರ್ಶಿಗಳಾದ ನೂರ್ ಮೊಹಮ್ಮದ್ ಅಲಿ, ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀಮತಿ ಆನಿಯಾ ಅಲಿ ಹಾಗೂ ನೂರ್ ಮೊಹಮ್ಮದ್ ಫಾಜ್, ಸಮ್‍ಫಾಜ್, ಪ್ರಾಂಶುಪಾಲರಾದ ಪ್ರಸಾದ್.ಹೆಚ್.ಬಿ ಹಾಗೂ ಎಲ್ಲಾ ಉಪನ್ಯಾಸಕ/ಕಿ ವೃಂದದವರು ಅಭಿನಂದಿಸಿದ್ದಾರೆ.