ಸೇವಾಭಾರತಿ ಪಿಯುಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಶೇ.99ರಷ್ಟು ಫಲಿತಾಂಶ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ. 13-ಸೇವಾಭಾರತಿಕಾಲೇಜಿಗೆ ವಿಜ್ಞಾನ ವಿಭಾಗದ 89 ವಿದ್ಯಾರ್ಥಿಗಳಲ್ಲಿ 88 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡ 99.00 ಫಲಿತಾಂಶ ಬಂದಿರುತ್ತದೆಅತ್ಯುನ್ನತಶ್ರೇಣಿ -33, ಪ್ರಥಮದರ್ಜೆ-52 ದ್ವಿತೀಯದರ್ಜೆ-02, ತೃತೀಯದರ್ಜೆ-01 ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದ 97 ವಿದ್ಯಾರ್ಥಿಗಳಲ್ಲಿ 87 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.85.56% ಫಲಿತಾಂಶ ಬಂದಿರುತ್ತದೆ ಅತ್ಯುನ್ನತಶ್ರೇಣಿ-13, ಪ್ರಥಮದರ್ಜೆ-50 ದ್ವಿತೀಯ ದರ್ಜೆ-15, ತೃತೀಯದರ್ಜೆ-5 ಪಡೆದಿರುತ್ತಾರೆ.
ನಗರದಒಟ್ಟಾರೆ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಮ್ಮಕಾಲೇಜಿನಿಂದಒಟ್ಟು 186 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 171 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 92.00 ಫಲಿತಾಂಶ ಬಂದಿರುತ್ತದೆ. ಇದರಲ್ಲಿ ಅತ್ಯುನ್ನತದರ್ಜೆಯಲ್ಲಿ-46. ಪ್ರಥಮದರ್ಜೆಯಲ್ಲಿ 102, ದ್ವಿತೀಯ ದರ್ಜೆ-17 ತೃತೀಯದರ್ಜೆ-06ಯಲ್ಲಿ ತೇರ್ಗಡೆಯಾಗಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಸೇವಾಭಾರತಿ ಶಿಕ್ಷಣಸಂಸ್ಥೆ(ರಿ)ಯ ಆಡಳಿತಮಂಡಲಿ, ಪ್ರಾಂಶುಪಾಲರು, ಉಪನ್ಯಾಸಕರ ವೃಂದ ಹಾಗೂ ಸಿಬ್ಬಂಧಿ ವರ್ಗದವರು ಅಭಿನಂದಿಸಿದ್ದಾರೆ.