ಮಳೆ ನೀರನ್ನು ಹಿಡಿದಿಡುವಲ್ಲಿ ನಾವು ವಿಫಲವಾಗಿದ್ದೇವೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.13- ಮಳೆ ನೀರನ್ನು ಹಿಡಿದಿಡುವಲ್ಲಿ ನಾವು ಸಂಪೂರ್ಣ ವಿಫಲರಾಗಿದ್ದೇವೆಎಂದು ಸಹಜ ಕೃಷಿ ವಿಜ್ಞಾನಿ ಡಾ|| ಮಂಜುನಾಥಅಭಿಪ್ರಾಯಪಟ್ಟರು.
ಜೆಎಸ್‍ಬಿ ಪ್ರತಿμÁ್ಠನದ ವತಿಯಿಂದ ಶುಕ್ರವಾರ ಯಳಂದೂರು ತಾಲೂಕಿನ ಹೊನ್ನೂರಿನ ಮಹೇಂದ್ರಅವರತೋಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆಯಲ್ಲಿ ತೋಟಗಳ ನಿರ್ವಹಣೆ – ಕ್ಷೇತ್ರ ಪ್ರಾತ್ಯಕ್ಷಿಕೆಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದಅವರು, ಇಂದು ಬಿಸಿಲಿನ ತಾಪವನ್ನುತಡೆಯಲುಆಗುತ್ತಿಲ್ಲ. ತಿಂಗಳ ಪೂರ್ತಿ ಬಿಸಿಲಿನ ತಾಪ ಜಾಸ್ತಿಯಾಗಿ ನೀರಿನ ಬವಣೆ ಜಾಸ್ತಿಯಾಗುತ್ತಿದೆ. ಬಿಸಿಲು ಜಾಸ್ತಿಯಾದ್ರೆ ಸೂಕ್ಷ್ಮ ಜೀವಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಸೂಕ್ಷ್ಮ ಜೀವಿಗಳು ಗಿಡ-ಮರಗಳಿಗೆ ಆಹಾರ ಪೂರೈಕೆ ಮಾಡದಿದ್ದರೆ, ಅವು ಬಹಳ ಕಾಲ ಉಳಿಯುವುದಿಲ್ಲ. ನಾವು ತೋಟಗಳನ್ನು ಉಳಿಸಲು ಮಾರ್ಗಗಳನ್ನು ಹುಡುಕಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬಹಳ ಚರ್ಚೆ ನಡೆಯಬೇಕಿದೆ. ಇವತ್ತುರೈತರು ಬೆಳೆದು ನಿಂತಿರುವ ತೋಟಗಳನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಹತ್ತು ಕೊಳವೆ ಬಾವಿ ಕೊರೆಸಿದರೆ ಒಂದೆರಡರಲ್ಲಿ ಮಾತ್ರ ನೀರು ಲಭ್ಯ. ಅತ್ತ ಹಣವೂಇಲ್ಲ, ಇತ್ತ ನೀರೂ ಸಿಗುತ್ತಿಲ್ಲ. ಒಂದು ವೇಳೆ ನೀರು ಸಿಕ್ಕರೂ ಒಂದೆರಡು ತಿಂಗಳಲ್ಲೇ ಒಣಗುವ ಕೊಳವೆ ಬಾವಿಗಳೇ ಹೆಚ್ಚು. ಹೀಗಿರುವಾಗ, ಹವಾಮಾನ ಬದಲಾವಣೆಗೆ ನಾವು ಹೊಂದಿಕೊಳ್ಳುವ ಬಗೆಯನ್ನುಕಲಿಯಬೇಕಿದೆ. ನಾವು ಬದುಕನ್ನು ರೂಪಿಸಿಕೊಳ್ಳುವ ಬಗೆಯನ್ನು ತಿಳಿಯಬೇಕಿದೆ. ನಾವು ನಮ್ಮಊರಲ್ಲೇ ಉಳಿದ, ಬದುಕಲು ಸಾಕಷ್ಟು ಕೆಲಸ ಮಾಡಬೇಕಿದೆ. ಅದೆಂದರೆ, ಮೊದಲು ಉಳುಮೆ ರಹಿತವಾದ ವ್ಯವಸಾಯ ಮಾಡುವುದನ್ನುಕಲಿಯಬೇಕು. ಭೂಮಿಯ ಮೇಲ್ಮೈಯಲ್ಲಿ ಸದಾ ಮುಚ್ಚುಗೆ ಇರುವಂತೆ ನೋಡಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಲ್ಲಿಸಬೇಕು. ಮಿಶ್ರ ಬೆಳೆಗಳನ್ನು ಬೆಳೆಯಬೇಕು. ಬರವನ್ನುಎದುರಿಸುವ ಸಾಮಥ್ರ್ಯತೋಟವನ್ನು ಸಜ್ಜುಗೊಳಿಸಬೇಕು. ಸದಾಕಾಲವೂ ತಂಪಾಗಿರುವಂತೆ ನೋಡಿಕೊಳ್ಳಬೇಕು.
ಮಳೆ ನೀರಿನ ಪೂರ್ಣ ಬಳಕೆ – ನಮ್ಮತೋಟದಲ್ಲಿ ಬಿದ್ದಒಂದು ಹನಿ ಮಳೆ ನೀರು ಈಚೆ ಹೋಗುವಂತಿಲ್ಲ. ಮುಚ್ಚಿಗೆ ಮತ್ತು ಗಿಡಗಳ ಸಾಂದ್ರತೆ ಕಾರಣಗಳಿಂದ ನೆಲವೆಲ್ಲಾ ಸ್ಪಂಜಿನಂತಾಗಿ, ಎಲ್ಲಾ ನೀರನ್ನು ಒಳಗೆ ತೆಗೆದುಕೊಳ್ಳುತ್ತದೆ. ತೀಕ್ಷ್ಮಜೀವಿಗಳು, ಎರೆಹುಳು, ಗೊದ್ದ, ಇರುವೆ ಮತ್ತು ಗಿಡಮರಗಳ ಬೇರುಗಳು ಇದಕ್ಕೆ ಸಹಾಯ ಮಾಡುತ್ತವೆ.
ಮೊದಲುಗೊಬ್ಬರ, ಪೆÇೀಷಕಾಂಶಗಳ ನಿರ್ವಹಣೆ, ಎರಡನೆಯದಾಗಿ ನೀರಿನ ನಿರ್ವಹಣೆ, ಮೂರನೆಯದು ಗಿಡಗಳ ಸವರುವಿಕೆ ಮಾಡಿ, ಸರಿಯಾದಆಕಾರಕೊಟ್ಟು ಬೆಳೆಸಬೇಕು, ಕೊನೆಯದಾಗಿ ಬದುಗಳಲ್ಲಿ ಅಗಸೆ, ಕರಿಬೇವು, ನಗ್ಗೆ ಇಂತಹ ಗಿಡಗಳನ್ನು ಬೆಳೆಯಬೇಕು.
ವಿವಿಧ ಬೆಳೆಗಳನ್ನು ಬೆಳೆದು ಬೆಳೆಗಳ ಮಾರ್ಪಾಡು ಮಾಡುವುದರಿಂದ ಕೀಟಗಳು ಮತ್ತು ರೋಗಗಳ ಪ್ರಸರಣವನ್ನುತಡೆಯುತ್ತದೆ ಮತ್ತು ತೋಟಗಳನ್ನು ಅಪಾಯಕಾರಿ ರೋಗಗಳಿಂದ ರಕ್ಷಿಸುತ್ತದೆ. ಇದರಿಂದ ಮಣ್ಣಿನರಚನೆಯನ್ನು ಸುಧಾರಿಸುತ್ತದೆ ಮತ್ತು ಕಳೆಗಳ ಹರಡುವಿಕೆಯುಕಡಿಮೆ ಮಾಡುತ್ತದೆ, ಇದು ನಿಮ್ಮತೋಟ ನಿರ್ವಹಣೆಯ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿರೈತ ಸಂಘದ ಹೊನ್ನೂರು ಪ್ರಕಾಶ, ಜೆಎಸ್‍ಬಿ ಪ್ರತಿμÁ್ಠನದಎಸ್. ಶಶಿಕುಮಾರ, ಪ್ರಸನ್ನ, ಪ್ರತಾಪಅರಸು, ಈಶಪ್ರಸಾದ, ಮೆಲ್ಲಹಳ್ಳಿ ಚಂದ್ರಮೌಳೀಶ, ಕೆಸ್ತೂರು ನಾಗರಾಜಪ್ಪ, ಯರಗಂಬಳ್ಳಿ ವೃಷಬೇಂದ್ರ, ಬಸವಟ್ಟಿ ಶಂಕರಮೂರ್ತಿ, ಮಲ್ಲಿಗೆಹಳ್ಳಿ ಮಹೇಶ, ಬೆಂಗಳೂರಿನಿಂದ ಶಶಾಂಕ, ಸಿದ್ದಪ್ಪ, ಮಾದಪ್ಪ, ಕೊಳ್ಳೇಗಾಲದಿಂದಚಂದ್ರಶೇಖರಯ್ಯ, ಪ್ರವೀಣ, ಮತ್ತಿತರರು, ಸ್ಥಳೀಯ ರೈತರು ಮತ್ತುಗ್ರಾಮಸ್ಥರಿದ್ದರು.