ಕೆಸಿಇಡಿಟಿ ಶಾಲೆಯಲ್ಲಿ ಪದವಿ ಪ್ರದಾನ
ಕಲಬುರಗಿ,ಏ.12-ಶಿಕ್ಷಣ ಪಡೆಯುವುದೆಂದರೆ ಪಠ್ಯ ಪುಸ್ತಕಗಳನ್ನು ಓದಿ, ಪರೀಕ್ಷೆ ಬರೆದು ಅಂಕ ಪಡೆಯುವುದಷ್ಟೇ ಅಲ್ಲ, ಅದರ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಮತ್ತು ಭಾವೀ ಜೀವನ ಕಟ್ಟಿಕೊಳ್ಳಲು ಭದ್ರ ಬುನಾದಿ ಹಾಕುವುದರ ಕಡೆಗೆ ಗಮನ ಹರಿಸಬೇಕು ಎಂದು ಕೆಸಿಇಡಿಟಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ನುಡಿದರು.
ನಗರದ ಆದರ್ಶ ನಗರದಲ್ಲಿರುವ ಕೆಸಿಇಡಿಟಿ ಬಾಲಕಿಯರ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಲ್‍ಕೆಜಿಯಿಂದ 9ನೇ ತರಗತಿವರೆಗೆ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅವರ ಪಾಲಕರೊಂದಿಗೆ ಸನ್ಮಾನಿಸಲಾಯಿತು. ಉಳಿದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲಾಯಿತು.
ಆಡಳಿತ ಮಂಡಳಿಯ ಸದಸ್ಯರಾದ ನಾಗಣ್ಣ ಗಣಜಲಖೇಡ, ಬಸವರಾಜ ಆವಂಟಿ, ಎನ್.ಎಂ.ಪಾಟೀಲ, ವಿಜಯಕುಮಾರ ಗಾದಗಿ, ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಪಲ್ಲೇದ, ಜಯಶ್ರೀ, ಶಿಕ್ಷಕ-ಶಿಕ್ಷಕಿಯರು, ಪಾಲಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.