ಬಳಿಚಕ್ರ ವಿದ್ಯಾರ್ಥಿನಿ ಮಹೇಶಮ್ಮ ಜಿಲ್ಲೆಗೆ ಮೂರನೇ ಸ್ಥಾನ
ಸೈದಾಪುರ:ಏ.12:ಇಲ್ಲಿಗೆ ಸಮೀಪದ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಹೇಶಮ್ಮ ದ್ವಿತೀಯ ಪಿಯುಸಿಯಲ್ಲಿ 580 ಅಂಕ ಪಡೆದು ಶೇ96 ಪ್ರತಿಶತದೊಂದಿಗೆ ಜಿಲ್ಲೆಗೆ ಮೂರನೇ ಸ್ಥಾನ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣಳಾಗಿದ್ದಾಳೆ. ಕನ್ನಡದಲ್ಲಿ 98, ಇಂಗ್ಲೀಷ 88, ಇತಿಹಾಸದಲ್ಲಿ 100, ಅರ್ಥಶಾಸ್ರ್ತದಲ್ಲಿ 96, ಸಮಾಜಶಾಸ್ತ್ರದಲ್ಲಿ 100, ರಾಜ್ಯ ಶಾಸ್ತ್ರದಲ್ಲಿ 98 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ಗ್ರಾಮೀಣ ಭಾಗದ ಈ ವಿದ್ಯಾರ್ಥಿನಿಯ ಸಾಧನೆ ಇತರರಿಗೆ ಮಾದರಿಯಾಗಿದೆ. ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ ಎಂದು ಪ್ರಾಂಶುಪಾಲ ಮಹಾಂತೇಶ ಕಲಾಲ, ಕಾಲೇಜು ಸುಧಾರಣಾ ಸಮಿತಿ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.