ಮಾಳಿ ಸಮಾಜ ಬಾಂಧವರಿಂದ ಜ್ಯೋತಿಬಾ ಪುಲೆ ಜಯಂತಿ ಆಚರಣೆ
ಬಸವನಬಾಗೇವಾಡಿ:ಏ.12: ಭಾರತದ ಕ್ರಾಂತಿಕಾರಿ ಹೋರಾಟಗಾರರಾಗಿದ್ದ ಜ್ಯೋತಿ ಬಾ ಪುಲೆ ಅವರು ಸಾಮಾಜಿಕ ಸಮಾನತೆ ಮತ್ತು ಮಹಿಳಾ ಶಿಕ್ಷಣಕ್ಕಾಗಿ ಹೋರಾಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮಾಳಿ ಸಮಾಜದ ಮುಖಂಡ ಜಟ್ಟಿಂಗರಾಯ ಮಾಲಾಗರ ಹೇಳಿದರು.
ಪಟ್ಟಣದ ನಾಗೂರ ರಸ್ತೆಯಲ್ಲಿ ಮಾಳಿ ಸಮಾಜ ಭಾಂದವರಿಂದ ಹಮ್ಮಿಕೊಂಡ ಜ್ಯೋತಿ ಬಾ ಪುಲೆ ಅವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 1827ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿ ಜ್ಯೋತಿ ಬಾ ಪುಲೆ ಅವರು ಅನೇಕ ಕ್ರಾಂತಿಕಾರಿಕ ಹೋರಾಟಗಳನ್ನು ಮಾಡುವ ಮೂಲಕ ಸಮಾಜದ ಸುದಾರಕರಾಗಿ, ದೀನ ದಲಿತ, ಹಿಂದುಳಿದ ವರ್ಗದ ಜನರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ,
ಧರ್ಮ, ಪಂಥ, ಸಂಪ್ರದಾಯ ಸಂಕುಚಿತ ಭಾವನೆಗಳಿಗೆ ಮರುಳಾಗದೆ ಮಾನವ ಧರ್ಮವನ್ನು ಅಂಗೀರಕರಿಸಬೇಕು ಎಂಭ ದ್ಯೇಯದೊಂದಿಗೆ 1873ರಲ್ಲಿ ಸತ್ಯ ಶೋಧಕ ಸಮಾಜ ಸ್ಥಾಪಿಸಿದರು, ಅಂತಹ ಮಹಾನ್ ಪುರುಷರ ಜೀವನ ಆದರ್ಶಗಳನ್ನ ಇಂದಿನ ಯುವ ಸಮೂಹÀ ತಿಳಿದು ಕೊಳ್ಳುವುದರೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಂಗು ಮಾಲಗಾರ, ಪವಡೆಪ್ಪ ಮಾಲಗಾರ, ಸಿದ್ದಣ್ಣ ಕಲ್ಲೂರ, ಅಪ್ಪುಶಾ ಮಾಲಗಾರ, ಮುತ್ತು ಮಾಲಗಾರ, ಸಂಜು ಪವಾರ, ಈರಣ್ಣ ಮಠಪತಿ, ಮಂಜು ಮಾಲಗಾರ, ಸಂಗಪ್ಪ ತೋಟದ, ರವಿ ಮಾಲಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.