ಸಡಗರ ಸಂಭ್ರಮದಿಂದ ರಂಜಾನ್ ಆಚರಣೆ
ಹೂವಿನ ಹಿಪ್ಪರಗಿ:ಏ.12: ಬ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ರಂಜಾನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸ್ಥಳೀಯ ಅಂಜುಮನ್ ಕಮಿಟಿಯ ಕಾರ್ಯದರ್ಶಿಯಾದ ಲಾಲಸಾಬ ಸೈಯದ ಅವರು ಮಾತನಾಡಿ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾಗಿರುವ ಈ ಮಾಸ ರಮ್ಜಾನ ಚಂದ್ರನ ಚಲನೆಯನ್ನು ಆದರಿಸಿದ ಇಸ್ಲಾಮಿಕ್ ಕ್ಯಾಲೆಂಡರ ಪ್ರಕಾರ 9ನೆಯ ತಿಂಗಳಾಗಿರುವ ರಂಜಾನ್ ಈ ತಿಂಗಳಲ್ಲಿ ಹಗಲಿನ ಸುಮಾರು 14 ಗಂಟೆಗಳ ಕಾಲ ಉಪವಾಸವಿರುವ ರಂಜಾನ್ ಮಾಸದ ಆಚರಣೆ ಒಂದು ಭಾಗವಸ್ತೆ ಹೊರತು ಉಪವಾಸವೇ ಆಚರಣೆ ಅಲ್ಲ ಇಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ದೇಹದ ಹಸಿವು ಕಾಮನೆ ಕೆಟ್ಟದ್ದನ್ನು ಆಚರಿಸುವ ಬಯಕೆಯನ್ನೇ ಮನಸ್ಸಿನಲ್ಲಿ ಮೊಳಕೆ ಒಡೆಯದಂತೆ ಮಾಡಿ ಶುದ್ಧೀಕರಿಸುವುದೇ ಪ್ರಮುಖ ಉದ್ದೇಶ. ಸೂರ್ಯೋದಯಕ್ಕೂ ಸುಮಾರು ಒಂದುವರೆ ಗಂಟೆ ಮೊದಲೇ ಶಹರಿ ಮಾಡಿ ಉಪವಾಸ ಮಾಡುವುದು ಮುಂದಿನ ಹದಿನಾಲ್ಕು ಗಂಟೆಗಳ ಕಾಲ ಮಾನಸಿಕವಾಗಿ ಬರೆ ಹಸು ಹತ್ತಿಸಿಕೊಂಡು ಮಾತ್ರವಲ್ಲ ಯಾವುದೇ ಪ್ರಲೋಭನೆಗೆ ಒಳಗಾಗದೆ ಸೂರ್ಯಸ್ತವರೆಗೆ ಕುರಾನ ಪಟ್ಟಣ ಪ್ರಾರ್ಥನೆ ದಾನ ಮತಿತರ ಕೆಲಸಗಳನ್ನು ನಮ್ಮ ನಿತ್ಯದ ಕೆಲಸಗಳೊಂದಿಗೆ ಆಚರಿಸುವುದೇ ನಿಜವಾದ ಉಪವಾಸವಾಗಿದೆ. ಈ ಉಪವಾಸದ ಉದ್ದೇಶ ಉಪವಾಸದ ಅವಧಿಯಲ್ಲಿ ಸುಳ್ಳು ಹೇಳುವುದು ಲಾಭ ಮಾಡಿಕೊಳ್ಳುವುದು ಇನ್ನೊಬ್ಬರಿಗೆ ನೋವು ನೀಡುವುದು ಮೊದಲಾದ ಬಯಕೆಗಳನ್ನು ಮೂಲದಲ್ಲಿಯೇ ಹತ್ತಿಕ್ಕುವುದೇ ರಂಜಾನ. ಬಡವರ ಹಸಿವು ಶ್ರೀಮಂತರಿಗೆ ಈ ಕಠಿಣ ಪರಿಶ್ರಮದ ಅರಿವು ಮಾಡಿಸುವುದೇ ಉಪವಾಸ ಎಂದರು.