ಜ್ಯೋತಿಬಾ ಫುಲೆ ಅವರ ಸಮಾಜ ಸುಧಾರಣಾ ಕಾರ್ಯಗಳೇ ನಮಗೆಲ್ಲ ಪ್ರೇರಣೆ: ಲಕ್ಷ್ಮಣ ಸವದಿ
ಅಥಣಿ :ಏ.12: ಆಧುನಿಕ ಭಾರತದ ಪ್ರಥಮ ಮಹಾತ್ಮಾ ಜ್ಯೋತಿಬಾ ಫುಲೆ ಅವರ ಆದರ್ಶ ನಮಗೆಲ್ಲರಿಗೂ ಮಾದರಿ, ಶಿಕ್ಷಣ ಕ್ಷೇತ್ರದಲ್ಲಿ ಫುಲೆ ದಂಪತಿಗಳು ಮಾಡಿದ ಗಮನಾರ್ಹ ಕ್ರಾಂತಿಕಾರಿ ಕೆಲಸಗಳಿಂದ ಇಂದಿಗೂ ಜನಮಾನಸದಲ್ಲಿ ಅವರು ಅಜರಾಮರವಾಗಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.
ಅವರು ಸ್ಥಳೀಯ ಜತ್ತ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಮಹಾತ್ಮಾ ಜ್ಯೋತಿಬಾಫುಲೆ ಸರ್ಕಲ್ ನಲ್ಲಿ ಹಮ್ಮಿಕೊಂಡ ಮಹಾತ್ಮಾ ಜ್ಯೋತಿಬಾಫುಲೆ ಅವರ 197 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಆಗೀನ ಕಾಲದಲ್ಲಿ ಜ್ಯೋತಿಬಾಫುಲೆ ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಗೆ ಹೋಗಬಹುದಿತ್ತು. ಕ್ರಮೇಣ ತಮ್ಮ ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಹೈಕೋರ್ಟಿನ ಪ್ರಮುಖ ನ್ಯಾಯಾಧೀಶರು ಆಗಬಹುದಿತ್ತು. ಆದರೆ ಅವರು ಸ್ಥಾಯಿಯಾಗಿ ಉಳಿದದ್ದು ಸಮಾಜ ಸುಧಾರಣಾ ಕಾರ್ಯಗಳಲ್ಲಿ, ಅವರ ಸಮಾಜ ಸುಧಾರಣಾ ಕಾರ್ಯಗಳೇ ನಮಗೆಲ್ಲರಿಗೂ ಪ್ರೇರಣೆ ಎಂದರು.
ಅನಂತರ ಶ್ರೀ ಮಹಾತ್ಮಾ ಜ್ಯೋತಿಬಾ ಫುಲೆ ಸರ್ಕಲ್ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದು ಶಾಸಕರಿಗೆ ಆಯೋಜಕರು ಹಾಗೂ ಮಾಳಿ ಸಮಾಜದ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಯುವ ನಾಯಕ ಚಿದಾನಂದ ಸವದಿ ಮುಖಂಡರಾದ ಎಸ್ ಕೆ ಬುಟಾಳಿ. ಗಿರೀಶ ಬುಟಾಳಿ, ರಾವಸಾಬ ಐಹೊಳೆ, ಧರೆಪ್ಪ ಠಕ್ಕಣ್ಣವರ, ಬಸವರಾಜ ಗುಮಟಿ, ಸುಭಾಸ್ ಮಾಳಿ, ರವಿ ಬಡಕಂಬಿ, ರವಿ ಭಾಸಿಂಗಿ, ಸಂತೋಷ ಸಾವಡಕರ, ಪರಶುರಾಮ ಸೋನಕರ, ರಮೇಶ ಮಾಳಿ, ಪ್ರಶಾಂತ ತೊಡಕರ, ಎಸ್ ಎಸ್ ಬಾಗಿ. ಮುರುಗೇಶ ಮೊಳೆ, ರಾಮಲಿಂಗ ಬಡಕಂಬಿ, ಮಹಾಂತೇಶ ಭಾಸಿಂಗಿ, ಸಚಿನ ಬುಟಾಳಿ, ಮಹಾದೇವ ಚಮಕೇರಿ, ಕೇದಾರಿ ದಿವಾನಮಳ, ಗಿರೀಶ ದಿವಾನಮಳ, ಮಹಾಂತೇಶ ಮಾಳಿ, ಬಸವರಾಜ ಹಳ್ಳದಮಳ, ಶಿವು ಹಲವೆಗಾರ, ರವಿ ಕಾಂಬಳೆ, ಶ್ರೀಶೈಲ ಬಡಕಂಬಿ, ಆನಂದ ಲಗಳಿ, ಶ್ರೀಶೈಲ ಕಿವಡಿ, ಸಂತೋಷ ಕಿವಡಿ, ಕಲ್ಲಪ್ಪ ನರೋಡೆ, ಶಿವು ಆಸಂಗಿ ಸೇರಿದಂತೆ ಅನೇಕರಿದ್ದರು.