ಬಸ್ಸಿನಲ್ಲಿ ಮಿಸ್ ಆಗಿದ್ದ 35 ಗ್ರಾಂ ಚಿನ್ನಾಭರಣ ಕ್ಯಾರಿಬ್ಯಾಗ್ ಪತ್ತೆ
ವಿಜಯಪುರ,ಏ.12:ಬಸ್ ನ ಕ್ಯಾರಿಯರ್ ಮೇಲಿಟ್ಟಿದ್ದ ಕ್ಯಾರಿಬ್ಯಾಗ್ ಬದಲಾಗಿ 35 ಗ್ರಾಂ ಚಿನ್ನಾಭರಣ ಕಳೆದುಕೊಂಡ ಮಹಿಳೆಗೆ ಮರಳಿ ಚಿನ್ನಾಭರಣ ದೊರೆತ ಪ್ರಸಂಗ ನಡೆದಿದೆ.
ಅಫಜಲಪೂರದಿಂದ ಬದಾಮಿಗೆ ತೆರಳುತ್ತಿದ್ದ ಏಂ 25 ಈ 03 ಸರ್ಕಾರಿ ಬಸ್ ನಲ್ಲಿ ಈ ಘಟನೆ ನಡೆದಿದೆ.
ಬಸವನ ಬಾಗೇವಾಡಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ಮಹಿಳೆ ಶಿಲ್ಪಾ ಎಂಬುವವರು ಚಿನ್ನಾಭರಣ ಇಟ್ಟಿದ್ದ ಕ್ಯಾರಿಬ್ಯಾಗ್ ಬದಲು ಆಗಿತ್ತು.
ಶಿಲ್ಪಾ ಬಾಗೇವಾಡಿ ಎಂಬುವವರು ಕ್ಯಾರಿ ಬ್ಯಾಗ್ ನಲ್ಲಿ ಚಿನ್ನಾಭರಣ ಇಟ್ಟು ಬಸ್ಸಿನ ಕ್ಯಾರಿಯರ್ ಮೇಲಿಲ್ಲಿಟ್ಟಿದ್ದರು. ಬಳಿಕ ಕುದರಿಸಾಲವಾಡಗಿ ಗ್ರಾಮದಲ್ಲಿ ಬಸ್ ಏರಿದ ಶಾರದಾ ಎಂಬ ಮಹಿಳೆಯೂ ಕ್ಯಾರಿಬ್ಯಾಗ್ ವೊಂದನ್ನು ಬಸ್ ಕ್ಯಾರಿಯರ್ ಮೇಲಿಟ್ಟಿದ್ದರು.
ಶಾರದಾ ಕುದರಿಸಾಲವಾಡಗಿ ಗ್ರಾಮದಿಂದ ನಿಡಗುಂದಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.
ನಿಡಗುಂದಿಯಲ್ಲಿ ತಮ್ಮ ಕ್ಯಾರಿ ಬ್ಯಾಗ್ ಬದಲಾಗಿ ಶಿಲ್ಪಾ ಬಾಗೇವಾಡಿ ಅವರ ಚಿನ್ನಾಭರಣವಿದ್ದ ಕ್ಯಾರಿಬ್ಯಾಗ್ ತೆಗೆದುಕೊಂಡು ಶಾರದಾ ಬಸ್ಸಿನಿಂದ ಕೆಳಗಿಳಿದಿದ್ದರು.
ಈ ವೇಳೆ ಕ್ಯಾರಿ ಬ್ಯಾಗ್ ಬದಲಾಗಿದ್ದನ್ನು ಕಂಡು ನಿಡಗುಂದಿ ಬಸ್ ನಿಲ್ದಾಣದಲ್ಲಿ ಶಿಲ್ಪಾ ಮಕ್ಕಳೊಂದಿಗೆ ಕುಳಿತು ರೋಧಿಸುತ್ತಿದ್ದಳು.
ಈ ವೇಳೆ ಸ್ಥಳೀಯ ನಿವಾಸಿ ಮೆಹಬೂಬ ವಾಲೀಕಾರ ಎಂಬುವವರು ಶಿಲ್ಪಾ ಅವರು ಅಳುತ್ತಿರುವುದನ್ನು ಕಂಡು ಬಾಗೇವಾಡಿ ಪೆÇಲೀಸರ ಸಹಾಯವಾಣಿ
112 ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಮೆಹಬೂಬ ಹಾಗೂ ಮಲ್ಲಯ್ಯ
ಸ್ಥಳಕ್ಕೆ ಬಂದ 112 ಸಹಾಯವಾಣಿಯ ಗಿರೀಶ ಛಲವಾದಿ, ಮಲ್ಲಯ್ಯ ಮಠ ಹಾಗೂ ಶಿವಾನಂದ ಮಟ್ಯಾಳ ಅವರು ವಿಚಾರಣೆ ನಡೆಸಿದ್ದಾರೆ. ಆಗ ಅತ್ತ ಬಸ್ ನಿಂದ ಇಳಿದು ಹೋಗಿದ್ದ ಶಾರದಾ ಕ್ಯಾರಿಬ್ಯಾಗ್ ನಲ್ಲಿದ್ದ ಚಿನ್ನಾಭರಣ ನಗದು ಕಂಡು ಆಶ್ಚರ್ಯ ಚಕಿತಳಾಗಿದ್ದಾಳೆ.
ಬಸ್ ನಲ್ಲಿದ್ದ ಕ್ಯಾರಿಬ್ಯಾಗ್ ಬದಲಾವಣೆ ಆಗಿದೆ ಎಂದು ಅರಿತ ಶಾರದಾ ಅವರು ಕ್ಯಾರಿಬ್ಯಾಗ್ ನಲ್ಲಿದ್ದ ಶಿಲ್ಪಾ ಬಾಗೇವಾಡಿ ಅವರ ಆಧಾರ್ ಕಾರ್ಡ್ ಆಧಾರದ ಮೇಲೆ ಅವರ ಮೊಬೈಲ್ ನಂಬರ್ ಪಡೆದು ಕರೆ ಮಾಡಿದ್ದಾರೆ.
112 ಪೆÇಲೀಸರೊಂದಿಗೆ ಶಾರದಾ ಇದ್ದ ಸ್ಥಳಕ್ಕೆ ತೆರಳಿದ ಶಿಲ್ಪಾ ಅವರು 35 ಗ್ರಾಂ ಚಿನ್ನಾಭರಣ, 3 ಸಾವಿರ ನಗದು ವಾಪಸ್ ಪಡೆದಿದ್ದಾರೆ.
ಶಿಲ್ಪಾ ಬಾಗೇವಾಡಿ ಕ್ಯಾರಿಬ್ಯಾಗ್ ಬದಲಾದ ಕಾರಣದಿಂದ ಅಚಾತುರ್ಯ ನಡೆದಿದೆ ಎಂದು ಶಾರದಾ ಹೇಳಿದ್ದಾರೆ.
ಕೊನೆಗೂ ಕಳೆದುಕೊಂಡಿದ್ದ 35 ಗ್ರಾಂ ಚಿನ್ನಾಭರಣ ಹಾಗೂ 3 ಸಾವಿರ ನಗದು ವಾಪಸ್ ಸಿಕ್ಕಿದ್ದಕ್ಕೆ ಶಿಲ್ಪಾ ಸಂತಸಗೊಂಡರು.
ತನಗೆ ಸಹಾಯ ಮಾಡಿದ ಮೆಹಬೂಬ್, ಹಾಗೂ 112 ಸಹಾಯವಾಣಿ ಪೆÇಲೀಸರಿಗೆ ಶಿಲ್ಪಾ ಧನ್ಯವಾದ ಹೇಳಿದ್ದಾರೆ.