ಉಪವಾಸದಿಂದ ಒಳ್ಳೆಯ ವ್ಯಕ್ತಿತ್ವ ಲಭ್ಯ: ಮೌಲಾನಾ ಸೈಯ್ಯದ ಪೈಸಲ್
ವಿಜಯಪುರ,ಏ.12: ಉಪವಾಸದ ಒಂದು ತಿಂಗಳಲ್ಲಿ ವ್ಯಕ್ತಿ ಶಿಸ್ತು, ಸಂಯಮ, ಒಳಿತುಗಳನ್ನು ರೂಢಿಸಿಕೊಂಡು ವಿಶಿಷ್ಟ ವ್ಯಕ್ತಿಯಾಗಿ ಮಾರ್ಪಾಡಾಗುತ್ತಾನೆ. ಧ್ಯಾನಸ್ಥನಾಗುತ್ತಾನೆ. ದಾನವಂತನಾಗಿ ನಿರ್ಗತಿಕರಿಗೆ ಶಕ್ತಿಯಾಗುತ್ತಾನೆ. ಹಸಿವು, ದಾಹವನ್ನು ಸಹಿಸುವ ಸಹನಾಮಯಿಯಾಗುತ್ತಾನೆ ಎಂದು ಮೌಲಾನಾ ಸೈಯ್ಯದ ಪೈಸಲ್ ಸಕಾಫ ಸಾದಾತ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ವಿಜಯಪುರ ನಗರದ ಬಡಾ ಆಸಾರ ಶರೀಫ ಮಸೀದೆಯಲ್ಲಿ ರಮಜಾನ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ನಂತರ ಮಾತನಾಡಿದ ಆವರು, ರಮಜಾನ ತಿಂಗಳಲ್ಲಿ ಉಪವಾಸ ಮಾಡಿ ಕೆಡಕು ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡುತ್ತಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ನಗರಾಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಆಜಾದ ಪಟೇಲ, ಮುಖಂಡರಾದ ಜಾವೀದ ಕಿಲ್ಲೆದಾರ. ಜಮೀರ ಬಾಗಲಕೋಟ. ಅನೀಷ ಬಂತೋಜಿ, ಮೌಲಾನಾ ಖಾದಿಂ, ಮುಕ್ತಾರ ದಖನಿ, ಸೈಯ್ಯದ ಮುಸ್ತಪಾ ಖಾದರಿ ಮುಂತಾದವರು ಉಪಸ್ಥಿತರಿದ್ದರು.