ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮುಖಂಡರು

ಸಂಜೆವಾಣಿ ವಾರ್ತೆ
ಹರಿಹರ.ಏ.೧೨: ಹರಿಹರ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಅಬೀಬುಲ್ಲಾ ಗನ್ನಾ ಅವರು ಸೇರಿದಂತೆ ಜೆಡಿಎಸ್ ನೂರಾರು ಪದಾಧಿಕಾರಿಗಳು ಜೆಡಿಎಸ್ ಪಕ್ಷವನ್ನು ತೊರೆದು ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ನಂದಿಗಾವಿ ಶ್ರೀನಿವಾಸ್, ಮಾಜಿ ಶಾಸಕ ಎಸ್.ರಾಮಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಜೆಡಿಎಸ್ ಪಕ್ಷದ ಪದಾಧಿಕಾರಿಗಳಾದ ಅಬ್ದುಲ್ ರಶೀದ್, ಅಬ್ದುಲ್ ಬಾಷೀರ್, ಅಬ್ದುಲ್ ಕರೀಮ್, ಹನೀಫ್ ಸಾಬ್, ಸೈಯದ್ ಅಫ್ರೀದಿ, ಅಬ್ದುಲ್, ಮುನೀರ್, ರಜಾಕ್ ಸಾಬ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಪ್ರಮುಖರು.ಈ ಸಂದರ್ಭದಲ್ಲಿ ಮುಖಂಡರುಗಳಾದ ಎಸ್.ಬಸಪ್ಪ, ಕೃಷ್ಣ ಸಾ ಭೂತೆ, ವಕೀಲ ಎಂ. ನಾಗೇಂದ್ರಪ್ಪ, ರೇವಣಸಿದ್ದಪ್ಪ, ಶಂಕರ ಖಟಾವಕರ್, ಸೈಯದ್ ಸನಾವುಲ್ಲಾ, ಹಾಲೇಶ್ ಗೌಡ, ಕೆ.ಕೆ.ರಫೀಕ್, ಅಲೀಂಬಾಷಾ, ಜಾಕೀರ್ ಸಾಬ್, ನಜೀರ್ ಹುಸೇನ್, ಎನ್.ಹುಲಿಗೇಶ್, ಕಾಂಗ್ರೆಸ್ ಹಿರಿಯ ಮುಖಂಡರು ಮತ್ತು ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.