ಕ್ರೀಡೆ ಅತಿ ಮುಖ್ಯ:ಬಸರೆಡ್ಡಿ ಹೆಗ್ಗಣಗೇರಾ
ಸೈದಾಪುರ:ಏ.12:ಉತ್ತಮ ಆರೋಗ್ಯಕ್ಕೆ ಕ್ರೀಡೆ ಅತಿ ಮುಖ್ಯವಾಗಿದೆ. ಈ ದಿಸೆಯಲ್ಲಿ ಗ್ರಾಮೀಣ ಭಾಗದಲ್ಲಿ ಯುವಕರು ಆಟಗಳಲ್ಲಿ ಆಸಕ್ತಿ ತೊರಿಸುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ ಎಂದು ಬಸರೆಡ್ಡಿಗೌಡ ಹೆಗ್ಗಣಗೇರಾ ಅಭಿಪ್ರಾಯಪಟ್ಟರು.
ಸಮೀಪದ ಹೆಗ್ಗಣಗೇರಾ ಗ್ರಾಮದಲ್ಲಿ ಅಪ್ಪು ಸ್ಮರಣಾರ್ಥ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಲಾದ ಪ್ರೀಮಿಯರ್ ಲೀಗ್ ಸೀಸನ್ 3ಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯಕರ ಜೀವನ ಶೈಲಿಯನ್ನು ಮುನ್ನಡೆಸುವಲ್ಲಿ ಕ್ರೀಡೆಯು ಜನರ ಯೋಗಕ್ಷೇಮಕ್ಕೆ ಕೊಡುಗೆಯನ್ನು ನೀಡುತ್ತದೆ. ಅಮೂಲ್ಯವಾದ ಜೀವನ ಪಾಠಗಳನ್ನು ಕಲಿಸುತ್ತದೆ. ಶಿಸ್ತು ಮತ್ತು ಬದ್ಧತೆಯ ಪ್ರಜ್ಞೆಯನ್ನು ಬೆಳಸುತ್ತದೆ. ಸ್ನೇಹದಿಂದ ಆಟದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಚಂದ್ರು ಗೌಡ ತುಮಕೂರು 5555 ಪ್ರಥಮ ನಗದು ಬಹುಮಾನವನ್ನು ಮತ್ತು ಕಪ್, ಸುನಿಲಗೌಡ ತುಮಕೂರು 3501 ದ್ವಿತೀಯ ಬಹುಮಾನ ಹಾಗೂ ಐಎನ್‍ಎಸ್ ತಂಡದ ವತಿಯಿಂದ ಇಮಾಮಸಾಬ. ಬೊಳೆರ ಶಿವರಾಜ ಕಾಲಾಲ, ನಾಗರಾಜ ಬ್ಯಾಗಾರ್ ಸ್ನೇಹಿತರ ಬಳಗದಿಂದ 4 ತಂಡದ ಆಟಗಾರರಿಗೆ ಟಿ ಶರ್ಟ್ ಕೊಡುಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರುಗೌಡ ತುಮಕೂರು, ಹಣಮಂತ್ರಾಯ ಗೌಡ ಕುಸುಮೂರ್ತಿ, ಬಸವರಾಜಪ್ಪಗೌಡ ಮಾಲಿ ಪಾಟೀಲ, ಲಚಮರೆಡ್ಡಿ ಕಲಾಲ್, ದೊಡ್ಡ ಹಣಮಂತ ಹಜ್ಜೆರಿ, ಗಾಲೆಪ್ಪ ಕಾಲಾಲ, ಮಲ್ಲಿಕರ್ಜುನ ಬ್ಯಾಗಾರ್, ಸಾಬರೆಡ್ಡಿ ಬಾಗ್ಲಿ, ಶಾಂತಗೌಡ ಗುತ್ತೇದಾರ, ತಿಮ್ಮಪ್ಪ ಗೋಪಾಳಿ, ಗ್ರಾಮದ ಹಿರಿಯ ನಾಯಕರು ಹಾಗೂ ಯುವಕರು ಮತ್ತು ಎಲ್ಲ ಕ್ರೀಡಾಪಟುಗಳು ಪಾಲ್ಗೊಂಡಿದ್ದರು