ಸಡಗರ ಸಂಭ್ರಮದ ರಂಜಾನ್ ಆಚರಣೆ
ಬಸವನಬಾಗೇವಾಡಿ:ಏ.12: ಕಳೆದ ಒಂದು ತಿಂಗಳಿನಿಂದ ಉಪವಾಸ ವೃತ ಆಚರಿಸಿದ ಮುಸ್ಲಿಂ ಭಾಂದವರು ಗುರುವಾರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮ ದಿಂದ ಆಚರಿಸಿದರು.
ಇಸ್ಲಾಂ ಸಮಾಜದ ಧರ್ಮಗುರು ಜಾಮೀಯಾ ಮಸೀದಿಯ ಇಮಾಮ ಮಹ್ಮದ ಅಲಿ ಮಿಲ್ಲಿ :- ರಂಜಾನ್ ತಿಂಗಳು ಮುಸಲ್ಮಾನರಿಗೆ ಪವಿತ್ರ ಮಾಸವಾಗಿದ್ದು ಒಂದು ತಿಂಗಳ ಕಾಲ ಉಪವಾಸ ವೃತ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುಬೇಕು, ಇಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿ ನಮ್ಮಲ್ಲಿ ಆಗಿರುವ ಬದಲಾವಣೆಯನ್ನ ಅರಿತುಕೊಳ್ಳಬೇಕು, ಪ್ರತಿಯೊಬ್ಬರು ಕೂಡಿಕೊಂಡು ಪ್ರೀತಿಯಿಂದ ಸಹಬಾಳ್ವಿಯಿಂದ ಜೀವಿಸಬೇಕು ಎನ್ನುವುದನ್ನ ಕಲಿಸಿಕೊಡುವ ಒಂದು ವಿಶೇಷ ಆಚರಣೆಯೇ ರಂಜಾನ್ ಆಗಿದೆ.
ಸಾಮೂಹಿಕ ಪ್ರಾರ್ಥನೆಯಲ್ಲಿ ಜಮಾತೇ ಇಸ್ಲಾಮಿಕ. ತಾಲೂಕಾ ಅಧ್ಯಕ್ಷ ಸಲೀಮ ಸಯ್ಯದ್, ಶಬ್ಬಿರ ನಧಾಫ್, ಮೈಬೂಬುಸಾಬ ಗಣಿ, ಮೈಬೂಸಾಬ ನಾಯ್ಕೊಡಿ, ಅಬ್ದುಲ ರಜಾಕ ಕೊರಬು, ಶಬ್ಬಿರ ನಾಯ್ಕೊಡಿ, ಮಲಿಕಸಾಬ ಕೊರಳ್ಳಿ, ಮತಾಬ ಬೊಮ್ಮನ್ನಳ್ಳಿ, ದಸ್ತಗೀರ ವಜ್ಜಲ, ಹುಸೇನ ನಾಧಾಫ್, ಲಾಲಸಾಬ ಜಮಕಾನಿ, ಅಬ್ಬು ಚೌಧರಿ, ರಜಾಕ ಭಾಗವಾನ, ಚಾಂದಬಾಷಾ ಕೊರಬು, ಅಲ್ಲಾಬಕ್ಷ ಕೊರಬು, ಇಸಾಕ ನಾಯ್ಕೊಡಿ, ಸದ್ದಾಂ ಮುಲ್ಲಾ, ಅಂಮಿನಸಾಬ ಮಮದಾಪುರ, ನಿಸಾರ ಚೌದರಿ, ಬಾಬುಸಾಬ ಭಾಗವಾನ, ಕಮ¯ಸಾಬ ಕೋರಬು, ನಜೀರ ಗಣಿ, ಎಮ್.ಡಿ.ಬಳಗಾನೂರ, ರಪೀಕ ಹೊಕ್ರಾಣಿ, ಬಾಬುಸಾಬ ಅತ್ತಾರ, ಮನ್ನಾನ ಶಾಬಾದಿ, ತೋಪಿಕ್ ಶಾಬಾದಿ, ಲಾಳೇಸಾ ಕೋರಬು, ಪುರಸಭೆಯ ನಾಮ ನೀರ್ದೆಶಕ ಸದಸ್ಯ ಅಜೀಜ ಬಾಗವಾನ, ಅಲ್ತಾಪ್ ಮುದ್ದೇಬಿಹಾಳ, ರಜಾಕ ಬಾಗಾವಾನ, ಶಬ್ಬಿರ ನದಾಫ್, ಅಲಿಸಾಬ ಖಾಜಿಸಾಬ ಕೋರಬು, ಸೇರಿದಂತೆ ಅನೇಕರು ಭಾಗವಹಿಸಿದ್ದರು.