ಕೊಳ್ಳೂರನಲ್ಲಿ ಭಾತೃತ್ವದ ರಂಜಾನ್ ಆಚರಣೆ
ಔರಾದ್:ಏ.12: ಹಿಂದು ಮುಸ್ಲಿಂ ಬಾಂಧವರು ಸಹೋದರರಂತೆ ಜೀವನ ನಡೆಸುತ್ತಿದ್ದೇವೆ ರಂಜಾನ್ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಪವಿತ್ರ ಹಬ್ಬವಾಗಿದ್ದು ಸಮಾಜದಲ್ಲಿ ಭಾತೃತ್ವವನ್ನು ಸಾರುತ್ತದೆ ಎಂದು ಗುರುನಾಥ ಕುಣಿಕೇರೆ ಹೇಳಿದರು.
ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಭಾಗವಹಿಸಿ ನಂತರ ಮಾತನಾಡಿದ ಅವರು, ರಂಜಾನ್ ಹಬ್ಬವು ಮುಸ್ಲಿಂ ಸಮುದಾ ಯಕ್ಕೆ ಪವಿತ್ರ ಹಬ್ಬವಾಗಿದ್ದು ಉಳ್ಳವಾರು ಇಲ್ಲದವರಿಗೆ ನೀಡುವುದೆ ಹಬ್ಬದ ಸಂದೇಶವಾಗಿದೆ ಎಂದರು.
ಹಾಫಿಜ್ ರೈಹಾನ ಅನ್ಸಾರಿ ಮಾತನಾಡಿ, ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಂಜಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವ ಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕು???ನ್ ಅವತೀರ್ಣಗೊಂಡಿ ತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು.ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕೆಟ್ಟ ಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ.ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯ ಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರ ಣೆಯ ಉದ್ದೇಶವಾಗಿದೆ ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಖಂಡೆರಾವ ಪಾಟೀಲ, ಶಿವಲಿಂಗಯ್ಯ ಸ್ವಾಮಿ, ಸಿದ್ದಪ್ಪ ಶೆಂಬೆಳ್ಳೆ, ಮಚೆಂದ್ರ ಸುತಾರ, ಚಾಂದಪಾಶಾ, ಶರಣಪ್ಪ ಅಡಸಾರೆ, ಪುಂಡಲೀಕ ರೆಡ್ಡಿ, ಬಂಡೆಪ್ಪ ದೇಗಲವಾಡೆ, ಬಸವರಾಜ ಹೊನ್ನಶಟ್ಟೆ, ಕಲ್ಲಪ ಬೊರಾಳೆ, ಬಸವರಾಜ ದೇಗಲವಾಡೆ, ಹಣಮಂತರಾವ ಪಾಟೀಲ, ಗಣಪತಿ ಇಬಿತವಾರ, ಅಲೀಮಪಾಶಾ, ಸಮೀರ್ ಸೇರಿದಂತೆ ಇತರರು ಇದ್ದರು.
ವಿಶೇಷ ಭೋಜನ:
ತಿಂಗಳಿಡೀ ಉಪವಾಸ ಆಚರಿಸಿದ್ದ ಮುಸ್ಲಿಮರು, ಈದ್ ಉಲ್ ಫಿತ್ರ್ ದಿನ ವಿಶೇಷ ಊಟ ಸೇವಿಸಿದರು. ಶಾವಿಗೆ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಸಕ್ಕರೆ, ಹಾಲು, ಗಸಗಸೆ, ಪಿಸ್ತಾ ಬಳಸಿ ತಯಾರಿಸುವ ವಿಶೇಷ ಸಿಹಿ ತಿಂಡಿಗಳು ಹಾಗೂ ಬಗೆಬಗೆಯದಿನಿಸು ಮಾಡಿ ಕುಟುಂಬಸ್ಥರು ಹಾಗೂ ಸ್ನೇಹಿತರು ಹಬ್ಬದ ಸವಿಯನ್ನು ಸವಿದರು.