ಬೇಸಿಗೆ ರಜೆಯ ಬಿಸಿಯೂಟ ತುಂಬಾ ಸಹಕಾರಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.12: ಬೇಸಿಗೆ ರಜೆಯ ಬಿಸಿಯೂಟ ಬಡ ಮಕ್ಕಳಿಗೆ ತುಂಬಾ ಸಹಕಾರಿ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ರಜೆ ಬಿಸಿಯೂಟ ಹಾಗೂ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ 62ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದಿನಾಂಕ :11/04/2024 ರಿಂದ ದಿನಾಂಕ : 28/05/2024 ರವರೆಗೆ 41 ದಿನಗಳ ಕಾಲ 1ನೇ ತರಗತಿಯಿಂದ 10ನೇ ತರಗತಿಯ ಮಕ್ಕಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು.
ಪ್ರತಿದಿನ ಯೋಗ, ಧ್ಯಾನ, ವ್ಯಾಯಾಮ,ಪಾಠ,ಆಟ,ಕಂಪ್ಯೂಟರ್ ಕಲಿತು ಕೊನೆಯಲ್ಲಿ ಬಿಸಿಯೂಟ ಸವಿದು ಮನೆಗೆ ಹೋಗಬೇಕು ಎಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಶಾಮಲ,ತಳವಾರ ಸುಮಿತ್ರಾ, ಶೈಲಜಾ ಹಾಗೂ ಕುರುಬರ ಶ್ವೇತಾ ಗೆ ಬಹುಮಾನ ವಿತರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ನಿಂಗಮ್ಮ, ಪೋಷಕರಾದ ರತ್ನಮ್ಮ, ಸುಂಕಮ್ಮ,ಶಿಲ್ಪಾ, ವಿದ್ಯಾರ್ಥಿ ಪ್ರತಿನಿಧಿ ಮಹೇಶ, ಪಲ್ಲವಿ, ಉಮಾ, ತಿಪ್ಪೇಶ್ವರಿ, ಸಾಯಿ, ವೆಂಕಟ್ ಮುಂತಾದವರು ಉಪಸ್ಥಿತರಿದ್ದರು.