ಬಸ್ಸಿಗಾಗಿ ಗಾಗಿ ಪ್ರಯಾಣಿಕರು ನೂಕು ನಗ್ಗಲು
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.12: ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಇಂದು ಬೆಳಗ್ಗೆಯಿಂದಲೇ ತಂಡುಪಾ ತಂಡವಾಗಿ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಕಾದು ಕುಳಿತ ದೃಶ್ಯ ಸಾಮಾನ್ಯವಾಗಿತ್ತು.
ಯುಗಾದಿ ಹಾಗೂ ರಂಜಾನ್ ಹಬ್ಬಕ್ಕಾಗಿ ಬೇರೆ ಬೇರೆ ಊರುಗಳಿಂದ ಬಂದಿದ್ದ ಸಾರ್ವಜನಿಕರು ಇಂದು ಹಬ್ಬದ ನಂತರ ಮರಳಿ ತಮ್ಮ ಊರುಗಳಿಗೆ ತೆರಳಲು ಕಾದು ಕುಳಿತಿದ್ದರು.
ಸಿರುಗುಪ್ಪ, ಬಳ್ಳಾರಿ ಸಿಮಾಂದ್ರದ ಊರುಗಳಿಗೆ ತೆರಳಲು ಕಾದು ಕುಳಿತ ಜನ ಬಸ್ ಬರುತಿದಂತೆ ನೂರಾರು ಸಂಖ್ಯೆಯಲ್ಲಿ ಮುಗಿಬಿಳುತಿದ್ದ ದೃಶ್ಯ ಸಾಮಾನ್ಯವಾಗಿತ್ತು ಕೇಲವು ಬಸ್ ಗಳು ಬಸ್ ನಿಲ್ದಾಣದಲ್ಲಿ ನಿಲ್ಲದೆ ಹಾಗೆ ತೆರಳಿದವು, ಈ ಕುರಿತಂತೆ ಸಾರ್ವಜನಿಕರು ಬಳ್ಳಾರಿ ವಿಭಾಗೀಯ ಸಂಚಾರಿ ನಿಯಂತ್ರಣ ಅಧಿಕಾರಿ ಚಾಮರಾಜ ಅವರಿಗೆ ವಾಟ್ಸಾಪ್ ಮೂಲಕ ದೂರು ಸಲ್ಲಿಸಿದ್ದಾರೆ.