ಕೆಲ ಗ್ರಾಮೀಣಭಾಗದಲ್ಲಿ‌ ಉಲ್ಲಾಸ ಮೂಡಿಸಿದ ಮಳೆರಾಯ
ಸಂಜೆವಾಣಿ ವಾರ್ತೆ
ದಾವಣಗೆರೆ, ಏ.12;ಕಳೆದ 8 ದಿನಗಳ ಹಿಂದಷ್ಟೇ ದಿಢೀರನೇ ಸುರಿದು ಜನರಲ್ಲಿ ಉಲ್ಲಾಸ ಮೂಡಿಸಿದ್ದ ಮಳೆರಾಯ ಮತ್ತೆ ಗುರುವಾರ ಸಂಜೆ ತಾಲೂಕಿನ ಹೆಬ್ಬಾಳ್ ಗ್ರಾಮ, ಹೆಬ್ಬಾಳ್ ಬಡಾವಣೆ, ಹುಣಸೇಕಟ್ಟೆ, ಮಂಡಲೂರು, ಹಾಲುವರ್ತಿಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧಾರಣ ಮಳೆಯಾಗುವ ಮೂಲಕ ಖುಷಿ ಮೂಡಿಸಿದೆ.ತಾಲೂಕಿನ ಹೆಬ್ಬಾಳ್, ಹಾಲುವರ್ತಿ, ಹುಣಸೇಕಟ್ಟೆ, ಮಂಡಲೂರು ಸುತ್ತಮುತ್ತ ಸಂಜೆ ಸುರಿದ ಸಾಧಾರಣ ಮಳೆಯಿಂದಾಗಿ ಸುಮಾರು ಹೊತ್ತು ಭೂಮಿ ನೆನೆಯುವಂತಾಯಿತು. ಮಳೆಯಿಂದಾಗಿ ಏಕಾಏಕಿ ಮನೆಗಳಲ್ಲಿ ಸೋರುತ್ತಿದ್ದುದರಿಂದ ಹೆಂಚುಗಳನ್ನು ಸರಿಪಡಿಸಲು ಮನೆಗಳ ಪುರುಷರು, ಮಕ್ಕಳು ಏಣಿ ಹಾಕಿಕೊಂಡು, ಹೆಂಚು ಸರಿಪಡಿಸಲು ಮುಂದಾಗಿದ್ದರು. ಸಂಜೆ ದಾವವಣಗೆರೆ ನಗರದಲ್ಲಿ ತಂಪು ಗಾಳಿ ಬೀಸಿ, ಮಳೆ ಮೋಡ ಆವರಿಸಿದ್ದರೂ ಮಳೆಯಾಗಿಲ್ಲ. ಜಿಲ್ಲೆಯ ಉಳಿದ ಕಡೆ ಎಲ್ಲಿಯೂ ಮಳೆಯಾದ ಮಾಹಿತಿ ಇಲ್ಲ.
