ತಂದೆತಾಯಿ, ಶಿಕ್ಷಕ, ವೈದ್ಯರಿಗೆ ಮಾತ್ರ ದೇವರಸ್ಥಾನ
ಸಂಜೆವಾಣಿ ವಾರ್ತೆ
ಸಂಡೂರು : ಮೇ: 12:: ವೈದ್ಯರ ಸೇವೆ ಅಮೋಘವಾದುದು, ತಂದೆ ತಾಯಿ ಜನ್ಮಕೊಟ್ಟರೆ, ಗುರು ದಾರಿತೋರುತ್ತಾರೆ, ಅದರೆ ವೈದ್ಯರು ಮರುಜನ್ಮ ನೀಡುತ್ತಾರೆ, ಅವರನ್ನು ನಾವು ದೇವರಾಗಿ ಕಾಣುತ್ತೇವೆ ಎಂದು ಬಿಕೆಜಿ ಕಂಪನಿಯ ನಿರ್ದೇಶಕರಾದ ಬಿ.ನಾಗನಗೌಡ ತಿಳಿಸಿದರು.
ಅವರು ಪಟ್ಟಣದ ಬಿಕೆಜಿ ಕಂಪನಿಯ ಅವರಣದಲ್ಲಿ ಬಿಕೆಜಿ ಗ್ರೂಪ್ ಅಫ್ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ 29 ವರ್ಷಗಳ ಕಾಲ ಸಂಡೂರು ತಾಲೂಕಿನಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ. ರಾಮಶೆಟ್ಟಿಯವರ ನಿವೃತ್ತಿಯ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬದುಕಿನಲ್ಲಿ ಶಿಸ್ತನ್ನು ಅಳವಡಿಸಿಕೊಂಡ ವೈದ್ಯರು ಉತ್ತಮ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಯೊಬ್ಬರ ಜನಮಾನಸದಲ್ಲಿ ಉಳಿಸಿದ್ದಾರೆ, ಅಲ್ಲದೆ ಅವರ ಸಿಬ್ಬಂದಿಗಳು, ಮತ್ತು ರಾಮಶೆಟ್ಟಿಯವರು ನಿರಂತರವಾಗಿ ಬಿಕೆಜಿ ಕಂಪನಿಯ ಯಾವುದೇ ಸಿಬ್ಬಂದಿಗಳು ಸಹಕಾರ ನೀಡಿದ ರೀತಿ, ಪ್ರತಿ ವರ್ಷ ಉಚಿತ ಕ್ಯಾಂಪನಡೆಸಲು ನೀಡಿದ ಸಲಹೆ ಸೂಚನೆಗಳು ಬಹು ಅಮೂಲ್ಯವಾದವು ಎಂದರು.
ಬಿಕೆಜಿ ಕಂಪನಿಯ ಜನರಲ್ ಮ್ಯಾನೇಜರ್ ಪಿ.ಶ್ರೀನಿವಾಸ ರಾವ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ ಇವರನ್ನು ಬಂಡ್ರಿ ಡಾಕ್ಟರ್ ಎಂದೇ ಕರೆಯುತ್ತಾರೆ, ಕಾರಣ ಹಣ, ಸಂಪತ್ತು ನಮ್ಮನ್ನು ಸ್ಮರಿಸದು ಮಾಡಿದ ಸೇವೆ ನಮ್ಮನ್ನು ಗುರುತಿಸುತ್ತದೆ, ಇಂದು ಡಾ. ರಾಮಶೆಟ್ಟಿಯವರು ಹಳ್ಳಿಗರ ಮನದಲ್ಲಿ ಉಳಿದಿದೆ ಎಂದರು.
ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ರಾಜಶೇಖರಬೆಲ್ಲದ್ ಅವರು ಮಾತನಾಡಿ ಬಿಕೆಜಿ ಕಂಪನಿಯು ನಿರಂತರವಾಗಿ ಉಚಿತ ನೇತ್ರ ಚಿಕಿತ್ಸಾ ಶಿಬಿರ, ರಕ್ತದಾನ ಮಾಡುವ ಕಾರ್ಯಕ್ಕೆ ಡಾ. ರಾಮಶೆಟ್ಟಿಯವರ ಸಲಹೆ ಹಾಗೂ ಸಹಕಾರ ಅಮೋಘವಾದುದು, ಕರೋನ ಸಂದರ್ಭದಲ್ಲಿ ಅವರು ಬೆಂಬಲಿಸಿದ ರೀತಿ ಉತ್ತಮವಾದುದು ಅವರ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದರು.
ಸನ್ಮಾನ ಸ್ವೀಕರಿಸಿದ ಡಾ. ರಾಮಶೆಟ್ಟಿ ಮಾತನಾಡಿ ಸಮಾಜ ನನ್ನ ಸೇವೆಯನ್ನು ಗುರುತಿಸಿದೆ ಎನ್ನುವುದು ಈಗ ತಿಳಿಯುತ್ತಿದೆ ಕಾರಣ ಸರ್ಕಾರಿ ಸೇವೆ ಮಾಡುವವರಿಗೆ ಬರುವ ಎಲ್ಲಾ ರೀತಿಯ ಅತಂಕಗಳ ಮದ್ಯೆ ಸೇವೆ ಮಾಡುವುದು ಬಹು ಮುಖ್ಯ ಬಿಕೆಜಿ ಸಂಸ್ಥೆ  ಗುರುತಿಸಿ ಸನ್ಮಾನಿಸುವುದು ಇನ್ನೂ ಹೆಚ್ಚು ಸೇವೆ ಮಾಡುವ ಕೆಲಸಕ್ಕೆ ನಮ್ಮನ್ನು ಹಚ್ಚುತ್ತದೆ, ಕಾರಣ ವೈದ್ಯರಾದವರ ಸೇವೆ ನಿರಂತರ ಎಂಬುದನ್ನು ನಾವು ತಿಳಿಯಬೇಕು, ಸಂಡೂರಿನ ಜನತೆ ನನ್ನ ಸೇವೆಯನ್ನು ಗುರುತಿಸಿದ ರೀತಿ ನನಗೆ ಮಾತು ಬಾರದಂತಾಗಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಶೈಲಜಾ ರಾಮಶೆಟ್ಟಿ ದಂಪತಿಗಳನ್ನು ಸನ್ಮಾನಿಸಿಲಾಯಿತು, ಭಾರತಿ ಜಿ.ಕೆ. ಸ್ವಾಗತಿಸಿದರು, ಅನ್ನಪೂರ್ಣ ತಂಡ ಪ್ರಾರ್ಥಿಸಿದರು, ಗೋಪಾಲ ನಿರೂಪಿಸಿದರು ಶೈಲಜಾ ವಂದಿಸಿದರು.