ಬಿಜೆಪಿ ಪಕ್ಷಕ್ಕೆ ಕೆ.ಅರ್.ಪಿ.ಪಿಯ ಕೆ.ಎಸ್. ದಿವಾಕರ
ಸಂಜೆವಾಣಿ ವಾರ್ತೆ
ಸಂಡೂರು: ಏ: 12:   ಬಿಜೆಪಿ ಪಕ್ಷಕ್ಕೆ ಕೆ.ಅರ್.ಪಿ.ಪಿಯ ಸಂಡೂರಿನ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಸ್. ದಿವಾಕರ ಅವರು ಪಕ್ಷಕ್ಕೆ ಅಗಮಿಸಿ ಬಿಜೆಪಿಕಛೇರಿಯಲ್ಲಿ ಸಮ್ಮಿಲನಗೊಂಡಿದ್ದು ಬಹಳಷ್ಟು ಸಂತಸವನ್ನು ಉಂಟುಮಾಡಿದೆ, ಅಲ್ಲದೆ ಕಾಂಗ್ರೇಸ್ ಅಭ್ಯರ್ಥಿಯ ನಿದ್ದೆ ಗೆಡಿಸಿದ್ದು ಬಿಜೆಪಿ ಅಭೂತಪೂರ್ವವಾಗಿ ವಿಜಯಶಾಲಿಯಾಗಲಿದೆ ಎಂದು ಎಂ.ಎಲ್.ಸಿ. ವೈ.ಎಂ. ಸತೀಶ್ ತಿಳಿಸಿದರು.
ಅವರು ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಕೆ.ಎಸ್. ದಿವಾಕರ್ ಹಾಗೂ ಅವರ ಎಲ್ಲಾ ಮುಖಂಡರಿಗೆ ಬಿಜೆಪಿ ಶಾಲನ್ನು ಹಾಕಿ ಸ್ವಾಗತಿಸಿ ಜಿಲ್ಲೆಯಲ್ಲಿ ಕೆ.ಅರ್.ಪಿ.ಪಿ. ಪಕ್ಷವು ಬಿಜೆಪಿ ಯಲ್ಲಿ ವಿಲೀನವಾಗಿದ್ದು ಬಿಜೆಪಿಯ ಗೆಲುವು ಖಚಿತವಾಗಿದೆ, ಇಬ್ಬರ ಭಿನ್ನತೆಯಿಂದ ಹಿಂದೆ ಕಾಂಗ್ರೇಸ್ ಗೆಲ್ಲುವಂತಾಗಿತ್ತು, ಅದರೆ ಈಗ ಅವರ ನಿದ್ದೆಗೆಡಿಸಿದ್ದು ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕೆ.ಎಸ್.ದಿವಾಕರ್ ಅವರು ಮಾತನಾಡಿ ನಾನು ಮತ್ತೋಮ್ಮೆ ತವರು ಮನೆಗೆ ಬಂದಂತಾಗಿದೆ, ಅ ಕೆಟ್ಟ ಗಳಿಗೆಯನ್ನು ಮರೆತು ನಾವೆಲ್ಲರೂ ಒಂದಾಗಿ ಇಡೀ ಸಂಡೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಬಿಜೆಪಿ ಪಕ್ಷಕ್ಕೆ ಕೊಡುವ ಮೂಲಕ ಶ್ರೀರಾಮುಲು ಅವರನ್ನು ಗೆಲ್ಲಿಸುತ್ತೇವೆ, ಯಾವುದೇ ರೀತಿಯಲ್ಲಿ ಭಿನ್ನತೆ, ವೈಮನಸ್ಸು ಇಲ್ಲದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಬಿಜೆಪಿ ಪಕ್ಷದ ಮೋದಿಯವರ ಸಾಧನೆಯನ್ನು ಜನರ ಮುಂದೆ ಇಟ್ಟು ಅತಿ ಹೆಚ್ಚು ಮತಗಳನ್ನು ಪಡೆಯುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿಯವರು ಮಾತನಾಡಿ ನಮ್ಮವರೇ ಅದ ದಿವಾಕರ ಅವರು ಕೆಲವು ಕಾರಣಗಳಿಂದ ಪ್ರವಾಸ ಹೋಗಿದ್ದರು ಈಗ ಬಂದಿದ್ದಾರೆ ಅವರ ಅಗಮನ ನಮಗೆ ಬಲವನ್ನು ಉಂಟುಮಾಡಿದೆ, ಮೋದಿಯವರು ಮತ್ತೋಮ್ಮೆ ಪ್ರಧಾನಿಯಾಗಬೇಕು ಎನ್ನುವ ಅಂಶ ಅವರಲ್ಲಿಯೂ ಇದ್ದು ಸಂಡೂರು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇವೆ, ಅತಿ ಹೆಚ್ಚು ಅನುದಾನ ಈ ಕ್ಷೇತ್ರಕ್ಕೆ ಬಂದಿದೆ, ಕೇವಲ ಸುಳ್ಳು ಗ್ಯಾರಂಟಿಗಳಿಂದ ದೇಶ ಪ್ರಗತಿ ಕಾಣದು, ದೇಶ ಮೊದಲು ಅದಕ್ಕಾಗಿ ಮೋದಿ ಗ್ಯಾರಂಟಿಯಿಂದ ಶ್ರೀರಾಮುಲು ವಿಜಯಶಾಲಿಯಾಗಿ ನರೇಂದ್ರ ಮೋದಿ ಮತ್ತೋಮ್ಮೆ ಪ್ರಧಾನಿಯಾಗುತ್ತಾರೆ ಎಂದರು.
ತಾಲೂಕು ಅಧ್ಯಕ್ಷ ನಾನಾನಿಕ್ಕಂ, ಜಿಲ್ಲಾ ಉಪಾಧ್ಯಕ್ಷರಾದ ವಿ.ಕೆ. ಬಸಪ್ಪ, ದರೋಜಿ ರಮೇಶ್, ರಘು, ನೂರಾರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದು ಕೆ.ಅರ್.ಪಿ.ಪಿ.ಯಿಂದ ಬಿಜೆಪಿ ಸೇರ್ಪಡೆಯಾದರು.