ಜಿ.ಗಂಗಮ್ಮ ಸಿರುಗುಪ್ಪ ತಾಲ್ಲೂಕಿಗೆ ಪ್ರಥಮ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.12:  2023-2024ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಾಲ್ಲೂಕಿನ ಹಚ್ಚೋಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಿ. ಗಂಗಮ್ಮ 600ಕ್ಕೆ 579 ಅಂಕಗಳನ್ನು ಗಳಿಸಿ ಸಿರುಗುಪ್ಪ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.