ತೆಕ್ಕಲಕೋಟೆ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.12: ತಾಲೂಕಿನ ತಕ್ಕಲಕೋಟೆ ಪಟ್ಟಣದ ಸರ್ಕಾರಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು ಕಲಾವಿಭಾಗದಲ್ಲಿ ಕುಮಾರಿ ಬಿ.ನಸ್ರೀನ್ 600ಕ್ಕೆ568 ಪಡೆದು ಶೇ.94 ಹಾಗೂ ವಾಣಿಜ್ಯ ವಿಭಾಗದಲ್ಲಿ ಕುಮಾರಿ ಎಂ.ಕೌಸರ್ ಬಾನು 600ಕ್ಕೆ553 ಅಂಕ ಪಡೆದು ಶೇ.92ರಷ್ಟು ಅಂಕ ಪಡೆದಿದ್ದು, ಒಟ್ಟರೆ ಕಾಲೇಜು ವಿಜ್ಙಾನ ವಿಭಾಗದಲ್ಲಿ ಶೇಕಡ 86, ಕಲಾ ವಿಭಾಗದಲ್ಲಿ ಶೇಕಡ 75, ವಾಣಿಜ್ಯ ವಿಭಾಗದಲ್ಲಿ ಶೇಕಡ 69 ಅಂಕ ಪಡೆದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕೊಟ್ರುಬಸಪ್ಪ ತಿಳಿಸಿದ್ದಾರೆ.