ವಚನಾಮೃತ ಬಳಗದಿಂದ ಮತದಾನದ ಜಾಗೃತಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಏ‌೧೨; ವಚನಾಮೃತ ಬಳಗ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಗರದ ನಿಜಲಿಂಗಪ್ಪ ಬಡಾವಣೆಯ ಗಡಿಯಾರ ಸರ್ಕಲ್ ನಲ್ಲಿ ರಂಗೋಲಿ ಮೂಲಕ ಮತದಾನ‌ಜಾಗೃತಿ ಮತ್ತು ಮತದಾನ ಜಾಗೃತಿಯ ಸ್ಲೋಗನ್ ಗಳೊಂದಿಗೆ ಮತದಾನದ ಮಹತ್ವ ತಿಳಿಸಲಾಯಿತು ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್  ಚಾಲನೆ ನೀಡಿದರು.ಈ ವೇಳೆ‌ ಮಾತನಾಡಿದ ಅವರು  ಮೇ 7 ರಂದು  ನಡೆಯಲಿರುವ ಚುನಾವಣೆಯಲ್ಲಿ ಎಲ್ಲಾ ನಾಗರಿಕ ಬಂಧುಗಳು ಮತ ಹಾಕುವುದರ ಮೂಲಕ ಹಕ್ಕನ್ನು ಚಲಾಯಿಸಬೇಕು ಎಂದರು. ಯಾವುದೇ ಆಮಿಷಗಳಿಗೂ ಒಳಗಾಗದಂತೆ ಧೈರ್ಯವಾಗಿ ಸೂಕ್ತವಾದ ವ್ಯಕ್ತಿಗೆ ಮತ ನೀಡಬೇಕೆಂದು ಜನತೆಗೆ ತಿಳಿಸಿದರುಹಾಗೆ ವಚನಮೃತ ಬಳಗ ಮತ್ತು ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಸತೀಶ್ ಮಾತನಾಡಿ ತಪ್ಪದೇ ಮತ ಚಲಾಯಿಸಿ ಸುಭದ್ರ ಸರ್ಕಾರವನ್ನ ನಿರ್ಮಿಸಿ ನಿಮ್ಮ ಮತದಲ್ಲಿ ದೇಶದ ಉಜ್ವಲ ಭವಿಷ್ಯವಿದೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಮತಾ ನಾಗರಾಜ್ ಚುನಾವಣೆಯ ದಿನ ಪ್ರತಿಯೊಬ್ಬರು ಮತ ಚಲಾಯಿಸಿ ಯಾವುದೇ ಕಾರಣಕ್ಕೂ ಸ್ವಂತ ಕಾರ್ಯದ ಮೇಲೆ ಬೇರೆ ಊರುಗಳಿಗೆ ಹೋಗುವುದು ಮಾಡಬೇಡಿ ಆ ದಿನ ರಜವನ್ನ ಮತದ ಹಕ್ಕನ್ನು ಚಲಾಯಿಸುವುದರ ಮೂಲಕ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಳಗದ ಹಾಗೂ  ಸಮಿತಿಯವರಾದ ಮದುಮತಿ ಗಿರೀಶ್, ಶಾಂತ ಶಿವಶಂಕರ್, ಕವಿತಾ, ಲತಾ ಕಪ್ಪಾಲಿ, ಶ್ರುತಿ ಚಾರ್ಮನಿ, ಸ್ವಪ್ನ ಸುಮಾ, ರೇಖಾ ಬೇತೂರ್, ಜ್ಯೋತಿ ಬೆಳಗಾವಿ, ದಿನಕರ್, ಮೃದಿನಿ ದೀಪಾ ದೇವರಾಜ್ , ಪೂರ್ಣಿಮಾ ಎಲ್ ಬಸವರಾಜ್ ಇವರು ಮತದಾನ ಜಾಗೃತಿಯ ಬಗ್ಗೆ ಕವನ ವಾಚನವನ್ನು ಕೂಡ ಮಾಡಿದರು. ಕುಮಾರಿ ಶ್ರೀಯ ಅವರು ಜಾಗೃತಿ ಮೂಡಿಸುವ ರಂಗೋಲಿಯನ್ನು ಹಾಕಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.