ಗಣಿ ಭಾದಿತ ಪ್ರದೇಶದಾಭಿವೃದ್ಧಿಗೆ ನಿಗದಿತ ಹಣ ಸದ್ಬಳಕೆಯಾಗಲಿ  – ಎಸ್.ಆರ್. ಹಿರೇಮಠ.
ಸಂಜೆವಾಣಿ ವಾರ್ತೆ
ಹೊಸಪೇಟೆ ಏ12: ರಾಜಕೀಯ ಪ್ರೇರಿತವಾಗಿ ಗಣಿಭಾದಿತ ಎಂದು ಹೇಳಿಕೊಂಡು ಅನಗತ್ಯವಾಗಿ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಬಳಸದಂತೆ ಕಟ್ಟು ನಿಟ್ಟಿನ ನಿರ್ದೇಶನ ನೀಡಲು ನ್ಯಾಯಾಲಯ ಮುಂದಾಗಿರುವುದು ಸ್ವಾಗತಾರ್ಹ ಬೆಳೆವಣಿಗೆ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಈಗಾಗಲೆ ಅನುಮತಿಸಿದ ಕಾಮಗಾರಿಗಳನ್ನು ಪರಿಶೀಲಿಸಿ ಅಗತ್ಯವಾಗಿರುವ ಕಾಮಗಾರಿಗಳ ಹೊರತಾಗಿ ಉಳಿದವನ್ನು ಪರಿಶೀಲಿಸಿ ಅನುಮತಿಸುವ ಹಾಗೂ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅಣಿಯಾಗಬೇಕು.
ಅಧಿಕಾರಗಳ ಹೊರತಾಗಿ ಪರಿಸರ ಮರುಸ್ಥಾಪನೆ ರಸ್ತೆ ಮೂಲಸೌಕರ್ಯ, ಕೃಷಿ, ಕೃಷಿ ಪೂರಕ, ಆರೋಗ್ಯ, ಪೌಷ್ಟಿಕಾಹಾರ, ಕೌಶಲ್ಯ, ಗೃಹ ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿ ಒಳಗೊಂಡಂತೆ ಜನ ಸಮುದಾಯ ಹಾಗೂ ಗಣಿಭಾದಿತ ಪ್ರೇಶದ ಜನ, ಅದರಲ್ಲೂ ಬಡವರು, ಕಾರ್ಮಿಕರು, ಸಹಕಾರದೊಂದಿಗೆ ರಚನೆಯಾಗುವ ಯೋಜನೆಗಳಿಗೆ ಅನುಮೋದಿಸಿ ಈ ಪ್ರದೇಶಗಳ ಸಮಗ್ರ ಪರಿಸರ ಅಭಿವೃದ್ಧಿಯ ಯೋಜನೆ ರೂಪಿಸಲು ಅನುಷ್ಠಾನಗೊಳಿಸಲು ಆದೇಶಿಸಿರುವುದು ಸ್ವಾಗತಾರ್ಹವಾಗಿದೆ.
ಗೋಷ್ಠಿಯಲ್ಲಿ ಜನ ಸಂಗ್ರಮ ಪರಿಷತ್ ನ ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ ಆಲ್ದಳ್ಳಿ, ಟಿ.ಎಂ.ಶಿವಕುಮಾರ, ಜೆ.ಎಂ.ಸಿಂಹ ಪಾಲ್ಗೊಂಡಿದ್ದರು