ಮತ ಜಾಗೃತಿ ಕುರಿತು ಬೈಕ್ ರ್ಯಾಲಿಗೆ ಜಾಲನೆ
ಧಾರವಾಡ,ಏ12: ಧಾರವಾಡ ಜಿಲ್ಲಾ ಸ್ವೀಪ್ ಸಮೀತಿಯಿಂದ ಮತದಾನ ಜಾಗೃತಿಗಾಗಿ ಧಾರವಾಡದ ಕರ್ನಾಟಕ ಕಾಲೇಜ ಆವರಣದಿಂದ ಬೈಕ್ ರ್ಯಾಲಿಗೆ ಧಾರವಾಡ ಜಿಲ್ಲಾ ಪಂಚಾಯತ ಸಿ.ಇ.ಓ. ಸ್ವರೂಪ ಟಿ.ಕೆ. ಜಾಲನೆ ನೀಡಿದರು.
ಮತದಾರರೆಲ್ಲರೂ ತಮ್ಮ ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಹಾಗೂ ನೆರೆ-ಹೊರೆ ಯವರಿಗೂ ಮತದಾನ ಹಕ್ಕು ಚಲಾಯಿಸುವಂತೆ ಜಾಗೃತಿ ಮೂಡಿಸಲು ತಿಳಿಸಿದರು. ಬೈಕ್ ರ್ಯಾಲಿಯು ನಗರದ ಪ್ರಮುಖ ಬೀದಿಗಳಿಂದ ಸಂಚರಿಸಿ, ಮತದಾನ ಕುರಿತು ಜಾಗೃತಿಯನ್ನು ಮೂಡಿಸಲಾಯಿತ್ತು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಮುಮ್ಮಿಗಟ್ಟಿಯ ಯು ಪ್ಲೇಕ್ಸ ಲಿಮಿಟೆಡ್ ಕಂಪನಿ, (U ಈಐಇಘಿ ಐimiಣeಜ ಛಿo.) ಕಂಪನಿಯ ಮುಖ್ಯಸ್ಥರು, ಉದ್ಯೋಗಿಗಳು ಹಾಗೂ ಕಾರ್ಮಿಕರಲ್ಲಿ ತಪ್ಪದೇ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಯಿತು.
ಮತಗಟ್ಟೆಯ ಸೌಲಭ್ಯ, ವಿಕಲಚೇತನರು, 85 ವರ್ಷ ಮೇಲ್ಪಟ್ಟ ವಯೋಮಾನ ದವರಿಗೆ, ಮತ ಗಟ್ಟೆ ಸ್ಥಳ ಹುಡುಕುವ ವಿಎಚ್ ಆಪ್ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕೈಗಾರಿಕೆ ಉಪ ನಿರ್ದೇಶಕರಾದ ಭೀಮಪ್ಪ ಮಾದರ ರವರು ಚುನಾವಣೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ, ಯು ಪ್ಲೇಕ್ಸ ಕಂಪನಿಯ ಅಧಿಕಾರಿ ಅರುಣ ಹೇಬ್ಲೀಕರ್ ಭಾಗವಹಿಸಿದ್ದರು.