ದಿಂಗಾಲೇಶ್ವರಶ್ರೀ ಮುನಿಸು ಪರಿಹಾರಕ್ಕೆ ಯತ್ನ
ಹುಬ್ಬಳ್ಳಿ,ಏ12: ಶಿರಹಟ್ಟಿಯ ದಿಂಗಾಲೇಶ್ವರ ಶ್ರೀಗಳ ಮುನಿಸು ಸ್ಥಳೀಯ ಮಟ್ಟದ ನಾಯಕರನ್ನು ಮೀರಿ ಹೋಗಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಮಾತುಕತೆಯನ್ನು ಅವರೊಂದಿಗೆ ನಡೆಸಿ ಸಮಸ್ಯೆಯನ್ನು ಶೀಘ್ರ ಇತ್ಯರ್ಥಗೊಳಿಸಲು ಯತ್ನಿಸುವುದಾಗಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಿಂದ ತಪ್ಪಾಗಿದ್ದರೆ ಸ್ವಾಮಿಜಿ ಕ್ಷಮೆ ಕೇಳುತ್ತೇವೆ ಎಂದು ತಿಳಿಸಿದರು.
ವಚನಾನಂದ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಬಿಜೆಪಿಯಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಜಿಗಳು ಹೇಳುತ್ತಿದ್ದು ಇದೇ ದಿ. 14 ರಂದು ಶ್ರೀಗಳು ಪಂಚಮಸಾಲಿ ಸಮಾಜದ ಸಭೆ ಕರೆದಿದ್ದು ಸಭೆಯಲ್ಲಿ ತಾವು ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡು ಮನವೊಲಿಸುವುದಾಗಿ ಅವರು ತಿಳಿಸಿದರು.