ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ-ಬಸನಗೌಡ
ಸಂಜೆವಾಣಿ ವಾರ್ತೆ
ಸಿಂಧನೂರು.ಏ.೧೨- ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಅನುಭವ ವಿಲ್ಲದ ,ಜನ ಸಾಮನ್ಯರಿಗೆ ಪರಿಚಯ ಇಲ್ಲದ ವ್ಯಕ್ತಿ ಆಗಿದ್ದಾರೆ ಆದ ಕಾರಣ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ಮಾಜಿ ರಾಜ್ಯ ಯುವ ಕಾಂಗ್ರೇಸ್ ಅದ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಸಿಂಧನೂರು ತಾಲೂಕಿನಾದ್ಯಂತ ಗೃಹ ಲಕ್ಷ್ಮೀ ಯೋಜನೆಯಲ್ಲಿ ೭೧ ಸಾವಿರ ಫಲಾನುಭವಿ ಗಳು ಹಣ ಪಡೆದಿದ್ದಾರೆ, ೫೦ ಲಕ್ಷ ಜನ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಬಸ್‌ನಲ್ಲಿ ಓಡಾಡಿದ್ದಾರೆ ಅದರಂತೆ ಅನ್ನ ಭಾಗ್ಯ ,ಗೃಹ ಜ್ಯೋತಿ ಯೋಜನೆ ಗಳು ಕೇವಲ ಕಾಂಗ್ರೇಸ್ ನವರಿಗೆ ಮಾತ್ರ ಕೊಟ್ಟಿಲ್ಲ ಜೆಡಿಎಸ್, ಬಿಜೆಪಿ ಸರ್ವ ಪಕ್ಷದವರು ಫಲಾನುಭವಿ ಗಳಿದ್ದಾರೆ. ಲೋಕಸಭಾ ಚುನಾವಣೆಗೆ ಮಹಿಳೆಯರಿಗೆ ವಾರ್ಷಿಕವಾಗಿ ಒಂದು ಲಕ್ಷ ರೂ, ಎಂ.ಎಸ್.ಪಿ ರೈತರ ನ್ಯಾಯ, ಕಾರ್ಮಿಕರಿಗೆ ಪಾಲುದಾರಿಕೆ ನ್ಯಾಯ, ಉದ್ಯೋಗ ನ್ಯಾಯ ಭರವಸೆ ಗಳನ್ನು ಕೊಟ್ಟಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ, ಮಾಜಿ ಶಾಸಕ ನಾಡಗೌಡರು ಈ ಮೊದಲೇ ಮೋದಿಯವರು ಮತ್ತೊಮ್ಮೆ ಎಂದೂ ಪ್ರಧಾನಿ ಆಗಲ್ಲ ಅಂತಹ ಹೇಳಿಕೆ ನೀಡಿ, ಈಗ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸಿದ್ದನ್ನು ಜನ ನೋಡುತ್ತಿದ್ದಾರೆ.
ಕೊಪ್ಪಳ ೫೦ ರಿಂದ ೬೦ ಸಾವಿರ ಲಿಡ್: ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ನಮ್ಮ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಈ ಬಾರಿ ೫೦ ರಿಂದ ೬೦ ಸಾವಿರ ಮತಗಳ ಲಿಡ್ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಏ.೧೪ ಭಾನುವಾರದಿಂದ ಪ್ರತಿ ಗ್ರಾಮ ಪಂಚಾಯತಿ (ರಾಮತ್ನಾಳ ಪ್ರಾರಂಭ) ಮಟ್ಟದಿಂದ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆಗಳನ್ನು ಆರಂಭಿಸಲಾಗುವುದು ಎಂದರು ಮತ್ತು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂ.ಪಿ ಟಿಕೇಟ್ ಕೊಡಲಾಗುವುದು ಎಂಬ ಭರವಸೆ ನೀಡಿದ ತರುವಾಯ ನಾಮಪತ್ರ ಹಿಂಪಡೆಯಲಾಗಿತ್ತು ಆದರೆ ಪಕ್ಷ ಕೊಟ್ಟ ಭರವಸೆ ಹುಸಿಗೊಳಿಸಿದ್ದಾರೆನ್ನುವ ಪತ್ರಕರ್ತರ ಪ್ರಶ್ನೆಗೆ ವರಿಷ್ಠರೊಂದಿಗೆ ಸೂಕ್ತ ಮಾತುಕತೆ ಆಗಿವೆ ಸೂಕ್ತ ಸಮಯದಲ್ಲಿ ತಿಳಿಸಲಾಗುತ್ತದೆಂದರು .
ಪಕ್ಷದ ಮುಖಂಡರಾದ ಶಿವಕುಮಾರ ಜವಳಿ, ವೆಂಕಟೇಶ ನಾಯಕ್, ವೀರ ರಾಜು, ಶರಣಯ್ಯ, ಹಬಿಬ್ ಖಾಜಿ, ಯಂಕನಗೌಡ ಗಿಣಿವಾರ ಉಪಸ್ಥಿತರಿದ್ದರು.