ನವಲಕಲ್ ಮಠಕ್ಕೆ ಕಾಂಗ್ರೆಸ್ ನಾಯಕರ ಭೇಟಿ
ಸಿರವಾರ.ಏ.೧೦- ತಾಲೂಕಿನ ನವಲಕಲ್ ಬೃಹನ್ಮಠಕ್ಕೆ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಜಿ.ಕುಮಾರ ನಾಯಕ, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್.ಬೋಸರಾಜು ಮತ್ತು ಮಾನ್ವಿ ಶಾಸಕರಾದ ಜಿ.ಹಂಪಯ್ಯ ನಾಯಕ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಪೀಠಾದಿಪತಿ ಷ.ಬ್ರ.ಅಭಿನವ ಶ್ರೀ ಸೋಮನಾಥ ಶಿವಾಚಾರ್ಯ ಮಹಾ ಸ್ವಾಮಿಗಳಿಗೆ ಸನ್ಮಾನಿಸಿ ಆಶೀರ್ವಾದ ಪಡೆದರು.
ಮಠದ ಶ್ರೀಗಳು ಕಾಂಗ್ರೆಸ್ ಅಭ್ಯರ್ಥಿಯಾದ ಜಿ.ಕುಮಾರ್ ನಾಯಕರ ಅವರಿಗೆ ಹಾಗೂ ಸಚಿವರಾದ ಎನ್ ಎಸ್ ಬೋಸರಾಜು, ಶಾಸಕ ಹಂಪಯ್ಯ ನಾಯಕ ಅವರಿಗೆ ಸನ್ಮಾನಿಸಿ ಆಶೀರ್ವದಿಸಿದರು.
ನಂತರ ಕಾಂಗ್ರಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಪತ್ರಕರ್ತರೊಂದಿಗೆ ಮಾತನಾಡಿ, ನಾನು ಈ ಜಿಲ್ಲೆಯಲ್ಲಿ ಹುಟ್ಟದೆ ಇರಬಹುದು ಆದರೆ ಈ ಹಿಂದೆ ಜಿಲ್ಲಾದಿಕಾರಿಯಾಗಿ, ಕೆಕೆಆರ್‌ಡಿಬಿ, ಆರ್.ಟಿಪಿಎಸ್, ವೈಟಿಪಿಎಸ್ ಎಂಡಿಯಾಗಿ ಕಾರ್ಯನಿರ್ವಹಿಸಿದೆನೆ. ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಬಿಸಿಯೂಟ ಯೋಜನೆ ನಾನು ಜಿಲ್ಲಾದಿಕಾರಿಯಾಗಿದಾಗ ರಾಜ್ಯಾದ್ಯಂತ ಅನುಷ್ಠಾನಕ್ಕೆ ಬಂತು ಜಿಲ್ಲೆಯ ಅರಕೇರಿ ಗ್ರಾಮದಿಂದ ಚಾಲನೆ ನೀಡಲಾಯಿತು. ಕಡಿಮೆ ಸಮಯದಲ್ಲಿ ಸಿಬ್ಬಂದಿಯ ಸಹಕಾರದಿಂದ ಯಶಸ್ವಿಗೊಳಿಸಿದ ಕಿರ್ತಿ ನನಗೆ ಸಲುತ್ತದೆ. ಈ ಕ್ಷೇತ್ರದ ಬಗ್ಗೆ ಅಪಾರವಾದ ಜ್ಞಾನ ಇದೆ. ಬಿಜೆಪಿ ಅಭ್ಯರ್ಥಿ ಯಾರೆ ಬಂದರು. ನನ್ನ ಗೆಲವು ಸುಲಭವಾಗಿದೆ. ಮುಖ್ಯಂಮತ್ರಿ ಸಿದ್ದರಾಮಯ್‌ನವರು ಜಾರಿಗೆ ತಂದಿರುವ ೫ ಯೋಜನೆಗಳು ಜನರಿಗೆ ತಲುಪಿಸಲಾಗಿದೆ, ಅವೇ ನನ್ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದರು. ನಂತರ ನವಲಕಲ್ ಮಸ್ಜಿದ್, ಸಿರವಾರ ಪಟ್ಟಣದ ಮೇಥೋಡಿಸ್ಟ್ ಚರ್ಚೆಗೆ ತೆರಳಿ ಫಾದರ್ ಸನ್ಮಾನಿಸಿ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ,ಕೆ ಶಾಂತಪ್ಪ, ಯುವ ಮುಖಂಡರಾದ ಶರಣಯ್ಯ ನಾಯಕ್, ಬ್ರಿಜ್ಜೇಶ ಪಾಟೀಲ್, ಎಂ,ಶ್ರೀನಿವಾಸ, ತಾ.ಪಂ. ಮಾಜಿ ಅದ್ಯಕ್ಷರಾದ ದಾನನಗೌಡ, ಚಂದ್ರು ಕಳಸ, ರಮೇಶ ದರ್ಶನಕರ್, ಕಲ್ಲೂರು ಬಸವರಾಜ, ಗಡ್ಲ ಬಸವರಾಜ,ನಾಗರಾಜ ಚಿನ್ನಾನ, ಸೂರಿ ದುರುಗಣ್ಣ ನಾಯಕ, ಚನ್ನವಬಸವ ಗಡ್ಲ, ವೈ.ಭೂಪನಗೌಡ, ಚನ್ನಪ್ಪ ನಾಗೋಲಿ, ನಿಂಬಯ್ಯಸ್ವಾಮಿ, ಮಾರ್ಕಪ್ಪ ಅಬ್ರಾಹಂ, ಬಡ್ಡ ಹನುಮಂತ, ದೇವಿಪುತ್ರಪ್ಪ,ಶರಣಪ್ಪ, ನಾಗಪ್ಪ ನವಲಕಲ್, ಬೀರಪ್ಪ, ಮಲ್ಲಪ್ಪ ನವಲಕಲ್, ಬಸವರಾಜ, ಹನುಮಂತ, ವಿರೇಶ ಗಡ್ಲ, ರಂಗನಾಥ ಭೋವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.