೨೨ ರಂದು ಖಾಸ್ಗತ, ವಿರಕ್ತಶ್ರೀಗಳ ಪುಣ್ಯಸ್ಮರಣೋತ್ಸವ
ತಾಳಿಕೋಟೆ:ಸೆ.೨೦: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಇದೇ ದಿ.೨೨ ರಂದು ಸಾಯಂಕಾಲ ೭ ಗಂಟೆಗೆ ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ೧೨೮ನೇ ಹಾಗೂ ಶ್ರೀ ವಿರಕ್ತ ಮಹಾಶಿವಯೋಗಿಗಳ ೧೦ನೇ ವರ್ಷದ ಪುಣ್ಯ ಸ್ಮರಣೋತ್ಸವದ ಧರ್ಮ ಸಭೆ ಕಾರ್ಯಕ್ರಮವು ಜರುಗಲಿದೆ.
ಈ ಧರ್ಮಸಭೆಯ ದಿವ್ಯ ಸಾನಿದ್ಯವನ್ನು ಇಂಗಳೇಶ್ವರ ವಿರಕ್ತಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಹುಣಶ್ಯಾಳದ ಶ್ರೀ ಆನಂದ ದೇವರು ವಹಿಸುವರು.
ಈ ಸಮಯದಲ್ಲಿ ಪ್ರವಚನಕಾರ ವೇ.ಬಂಡಯ್ಯ ಶಾಸ್ತಿçÃಗಳು ಉಪಸ್ಥಿತರಿರುವರು.
ರಾತ್ರಿ ೯ ಗಂಟೆಗೆ ಸಂಗೀತ ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ವಹಿಸುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಗೀತ ಶಿಕ್ಷಕರಾದ ಮಲ್ಲಿಕಾರ್ಜುನ ಭಜಂತ್ರಿ ಅವರು ನೇರವೇರಿಸುವರು.
ಮುಖ್ಯ ಅತಿಥಿಗಳಾಗಿ ಕೇಂಭಾವಿ ಸಂಗೀತ ಶಿಕ್ಷಕ ಬಸವರಾಜ ಭಂಟನೂರ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಹಾಗೂ ಈಶ್ವರ ಬಡಿಗೇರ, ಅವರು ಆಗಮಿಸುವರು.
ಇದೇ ಸಮಯದಲ್ಲಿ ತಬಲಾ ವಾದಕರಾಗಿದ್ದ ದಿ.ಮಡಿವಾಳಪ್ಪ ಮಂದೇವಾಲಿ ಅವರಿಗೆ ಮರಣೋತ್ತರ ವಿರಕ್ತಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವದು.
ಧಾರವಾಡದ ರಂಗಾಯಣದ ನಿದೇರ್ಶಕ ರಾಜು ತಾಳಿಕೋಟಿ, ಮಲ್ಲಿಕಾರ್ಜುನ ಬೆನಕನಳ್ಳಿ, ಶಿವಾನಂದ ಬಡಿಗೇರ, ಶ್ರೀಮತಿ ಪ್ರೇಮಾ ಶೆಟ್ಟಿ, ಅವರಿಗೆ ವಿರಕ್ತಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಇದೇ ಸಮಯದಲ್ಲಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಎಸ್.ಎಸ್.ಗಡೇದ, ಡಾ.ಪರಶುರಾಮ ಕಟ್ಟಿಸಂಗಾವಿ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವದೆಂದು ಪ್ರಕಟನೆ ತಿಳಿಸಿದೆ.