ಶಾಸಕರಿಗೆ ಮನವಿ
ಲಕ್ಷ್ಮೇಶ್ವರ,ಸೆ.20: ಲಕ್ಷ್ಮೇಶ್ವರದಿಂದ ಸುತ್ತು ಮುತ್ತಲಿನ ಗ್ರಾಮಾಂತರ ಪ್ರದೇಶಗಳ ರಸ್ತೆಗಳು ಸಂಪೂರ್ಣ ಗುಂಡಿಗಳಿಂದ ತುಂಬಿದ್ದು ಬಸ್ಸುಗಳನ್ನು ಓಡಿಸಲು ಅಸಾಧ್ಯವಾದ ಸ್ಥಿತಿ ಇದ್ದು ಪ್ರತಿನಿತ್ಯವೂ ಬಸ್ಸುಗಳು ದುರಸ್ತಿಗೆ ಬರುತ್ತಿದ್ದು ಕೂಡಲೇ ವಾಹನ ಸಂಚರಿಸಲು ತಕ್ಕಮಟ್ಟಿಗೆ ಗುಂಡಿಗಳನ್ನು ತುಂಬಿಸಿಕೊಡುವಂತೆ ಶಾಸಕ ಡಾಕ್ಟರ್ ಚಂದ್ರ ಲಮಾಣಿ ಅವರಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯು ಕಾರ್ಮಿಕರು ಚಾಲಕರು ಡಿಪೆÇೀ ಮ್ಯಾನೇಜರ್ ಸವಿತಾ ಆದಿಯವರ ನೇತೃತ್ವದಲ್ಲಿ ನಿನ್ನೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಲಕ್ಷ್ಮೇಶ್ವರ ಭಾಗದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಪ್ರತಿನಿತ್ಯವೂ ಚಾಲಕರು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದು ತಾಂತ್ರಿಕ ಕಾರಣಗಳು ಮತ್ತು ಆರೋಗ್ಯದ ಮೇಲೆ ಏರುಪೇರು ಆಗುತ್ತೆ ಎಂದು ಚಾಲಕರಹಿತ ದೃಷ್ಟಿಯಿಂದ ಮತ್ತು ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವ ದೃಷ್ಟಿಯಿಂದ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿ ಕೊಡುವಂತೆ ಶಾಸಕರಿಗೆ ಒತ್ತಾಯಿಸಿದ್ದಾರೆ.