ಜಾತಿಭೇದ ಮರೆತು ಕೆಲಸ ಮಾಡಿದರೆ ಯಶಸ್ಸು
ಚನ್ನಮ್ಮನ ಕಿತ್ತೂರು,ಸೆ.20: ಬ್ರಿಟಿಷರ ವಿರುದ್ಧ ಸಂಘಟನೆಯಾಗಬೇಕೆಂದು ಅಂದಿನ ಕಾಲದಲ್ಲಿ ಪ್ರತಿ ಗ್ರಾಮಗಳ ಓಣಿಯಲ್ಲಿ ಗಣೇಶ ಉತ್ಸವ ಅದ್ದೂರಿಯಿಂದ ಆಚರಿಸಲಾಗುತ್ತಿತ್ತು. ಇಂದು ಸಹ ಜಾತಿ-ಭೇದ ಮರೆತು ನಾವೆಲ್ಲರೂ ಒಗ್ಗಟ್ಟಿನಿಂದ ಸಂಘಟನೆ ಮಾಡಿಕೊಂಡು ಗಣೇಶ ಉತ್ಸವ ಆಚರಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ಅರಳೀಕಟ್ಟಿ ವರ್ತುಳದಲ್ಲಿ ಪೋಲಿಸ್ ಇಲಾಖೆ, ಪಪಂ ಹಾಗೂ ಗಣೇಶೋತ್ಸವ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನೆ ಕೊನೆಯದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ ಗಣೇಶ ಉತ್ಸವ ಯಶಸ್ವಿಯಾಯಿತು. ಅದೇ ರೀತಿ ಮುಂಬರುವ ಚನ್ನಮ್ಮನ ಉತ್ಸವ ಎಲ್ಲರೂ ಒಗ್ಗೂಡಿ ಅದ್ದೂರಿಯಿಂದ ಆಚರಿಸೋಣವೆಂದರು.
ಮುಖ್ಯ ಅತಿಥಿಗಳಾಗಿ ಕೆಎಂಎಫ್ ನಿರ್ದೇಶಕ ಹಾಗೂ ನಿಕಟಪೂರ್ವ ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿ ಜಾತ್ಯಾತೀತವಾಗಿ ಯಾವೊಂದು ಕೆಲಸ ಮಾಡಿದರೂ ಅದು ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಗಣೇಶ ಉತ್ಸವವೇ ನಿದರ್ಶನ. ಅದೇರೀತಿ ಮುಂಬರುವ ಚನ್ನಮ್ಮನ ವಿಜಯೋತ್ಸವ ಯಶಸ್ಸು ಕಾಣಲು ಕಾರಣವಾಗುತ್ತದೆ. ಅಭಿವೃದ್ಧಿ ಅಂದಾಗ ಪಕ್ಷ ಭೇದ ಮರೆತು ಕೆಲಸ ಮಾಡಬೇಕು. ಮುಂಬರುವ ಚನ್ನಮ್ಮನ ಉತ್ಸವಕ್ಕೆ ಹಾಲಿ ಶಾಸಕರು ತಮ್ಮ ಶಕ್ತಿ ಮೀರಿ ಅನುದಾನ ನೀಡಿ ಅಚ್ಚುಕಟ್ಟಾಗಿ ಆಚರಣೆ ಮಾಡಿದರೆ ರಾಷ್ಟ್ರವೇ ಕಣ್ತೆರೆದು ನೋಡುವಂತಾಗಬೇಕೆಂದರು. ಸಿಪಿಐ ಶಿವಾನಂದ ಗುಡಗನಟ್ಟಿ ಮಾತನಾಡಿದರು. ಬೈಲೂರಿನ ಬಾವುದ್ದೀನ (ಮೌಲಾನಾ) ಮಕಾನದಾರ ಪ್ರಾಸ್ತಾವಿಕ ನುಡಿಯನ್ನಾಡಿದರು.
ಸಾನಿಧ್ಯವಹಿಸಿ ಅರ್ಶೀವಚನ ನೀಡಿದ ಕಲ್ಮಠದ ಮಡಿವಾಳ ರಾಜಯೋಂಗೀದ್ರ ಸ್ವಾಮಿಜೀ, ನಿಚ್ಚಣಕಿ ಮಡಿವಾಳೇಸ್ವರ ಮಠದ ಪಂಚಾಕ್ಷರಿ ಸ್ವಾಮಿಜೀ ಅತಿಥಿಗಳನ್ನು ಸತ್ಕರಿಸಲಾಯಿತು.
ಡಿ.ವೈ.ಎಸ್.ಪಿ. ರವಿ ನಾಯಕ, ಮುಸ್ತಾಕ ಸುತಗಟ್ಟಿ, ಅಶಪಾಕ ಹವಾಲ್ದಾರ, ಸುನೀಲ್ ಘೀವಾರಿ, ಕೃಷ್ಣಾ ಬಾಳೇಕುಂದರಿಗಿ, ಸಿದ್ದು ಮಾರಹಾಳ, ಉಮೇಶ ಹುಂಬಿ, ಪರವೇಜ್ ಹವಾಲ್ದಾರ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಕೆಇಬಿ ಎಇಇ ಮಹೇಶ್ವರ ಹಿರೇಮಠ, ರಮೇಶ ಮೊಕಾಶಿ, ಕಿರಣ ವಾಳದ, ಈರಣ್ಣಾ ಅನಗೋಳ, ಉಮೇಶ ಶೆಟ್ಟರ, ಶಂಕರ ಬಡಿಗೇರ, ಬಸವರಾಜ ಸಂಗೋಳ್ಳಿ, ಅಶೋಕ ಮಾಳಗಿ, ದೌಲತ್ತ ಪರಂಡಿಕರ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‍ಐ ಪ್ರವೀಣ ಗಂಗೋಳ, ಪಪಂ ಸರ್ವಸದಸ್ಯರು, ವಿವಿಧ ಗಣೇಶ ಉತ್ಸವ ಕಮೀಟಿಯವರು, ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿದ್ದರು.