“ದ ವೆಲ್‌ನೆಸ್ ರೆವುಲ್ಯೂಷನ್” ಮ್ಯಾಗಝೀನ್ ಲೋಕಾರ್ಪಣೆ
ಮ್ಯಾಗಝೀನ್ ಓದಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ದಿನೇಶ್ ಗುಂಡೂರಾವ್
ಕಲಬುರಗಿ,ಸೆ.೨೦-ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವತಿಯಿಂದ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಆರೋಗ್ಯ, ಕ್ಷೇಮ, ಯೋಗ, ಸದೃಢತೆಯ ಬಗ್ಗೆ ಅರಿವು ಮೂಡಿಸಲು ಹೊರತಂದ “ದ ವೆಲ್‌ನೆಸ್ ರೆವುಲ್ಯೂಷನ್” ಮ್ಯಾಗಝೀನ್‌ನ ೨ ನೇ ಸಂಚಿಕೆಯನ್ನು ನಗರದ ಜಿಲ್ಲಾ ಪಂಚಾಯತಿ ಕಚೇರಿ ಅವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಲೋಕಾರ್ಪಣೆ ಮಾಡಿದರು.
ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಚಿಕಿತ್ಸೆ ಹಾಗೂ ಸಮಾಜಿಕ ಕ್ಷೇತ್ರದಲ್ಲಿ ಸದಾ ಹೊಸತನದೊಂದಿಗೆ ಕೆಲಸ ಮಾಡುತ್ತಿರುವ ಆಸ್ಪತ್ರೆಯಾಗಿದ್ದು, ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮನ್ನೂರ ಅವರು ಹೊಸ ಪ್ರಯತ್ನ ದೊಂದಿಗೆ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಆರೋಗ್ಯ, ಕ್ಷೇಮ, ಯೋಗ, ಸದೃಢತೆಯ ಬಗ್ಗೆ ಜಾಗೃತಿಗಾಗಿ “ದ ವೆಲ್ ನೇಸ್ ರೆವುಲ್ಯೂಷನ್” ಮ್ಯಾಗಝೀನ್‌ನ ೨ನೇ ಸಂಚಿಕೆಯನ್ನು ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದೆ. “ದ ವೆಲ್‌ನೆಸ್ ರೆವುಲ್ಯೂಷನ್” ಮ್ಯಾಗಝೀನ್ ಅನ್ನು ಸಚಿವ ದಿನೇಶ್ ಗುಂಡೂರಾವ್ ಓದುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಡಿ.ಹೆಚ್.ಓ ಶರಣಬಸಪ್ಪ ಕ್ಯಾತನಾಳ, ಆಮಿನ್ ಜಿಬರನ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕದ ಜನರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಮನ್ನೂರ ಆಸ್ಪತ್ರೆಯ ತಂಡ ಕಳೆದ ೩ ವರ್ಷದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಟ್ರಾಮಾ ಡೇ ಕುರಿತು ಜಾಗೃತಿ ಸೇರಿದಂತೆ ಅನೇಕ ಆರೋಗ್ಯದ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬಂದಿದೆ. ಜನರಿಗೆ ಆರೋಗ್ಯ ,ಕ್ಷೇಮ,ಯೋಗ, ಸದೃಢತೆಯ ಬಗ್ಗೆ ಜಾಗೃತಿ ಮೂಡಿಸಲು “ದ ವೆಲ್‌ನೆಸ್ ರೆವುಲ್ಯೂಷನ್” ಮ್ಯಾಗಝೀನ್ ೨ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ತಾಲೂಕಿನಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ್ ಮುನ್ನೂರ ತಿಳಿಸಿದರು.
