ಸೌಹಾರ್ಧತೆ ಕದಡುವ ಶಕ್ತಿಗಳ ವಿರುದ್ಧ ಹೋರಾಡಲು ನನಗೆ ಆಶೀರ್ವದಿಸಿ-ಜಿ.ಕುಮಾರ ನಾಯಕ
ರಾಯಚೂರು.ಏ.೧೨- ಈ ಲೋಕಸಭಾ ಚುನಾವಣೆ ನಮ್ಮೆಲ್ಲರಿಗೂ ಮಹತ್ವವಾದ ಚುನಾವಣೆಯಾಗಿದೆ. ಈ ಬಾರಿ ನಾವೇನಾದರು ತಪ್ಪು ಮಾಡಿದರೆ ಮುಂದಿನ ದಿನಗಳಲ್ಲಿ ಮೀಸಲಾತಿಯೇ ಇರುವುದಿಲ್ಲ. ಜನಸಾಮಾನ್ಯರ ಶಾಂತಿ ಸೌಹಾರ್ಧತೆಗೆ ದಕ್ಕೆಯುಂಟು ಮಾಡುವ ಕಾನೂನುಗಳು ಜಾರಿಗೊಳಿಸಿ ಪ್ರಜಾಪ್ರಭುತ್ವನ್ನು ನಾಶ ಮಾಡುವ ಹುನ್ನಾರ ಬಿಜೆಪಿ ನಡೆದಿದೆ. ದೇಶದಲ್ಲಿರುವ ಅಸಮಾನತೆ ತೊಲಗಿಸಿ, ಸರ್ವಾಂಗೀಣ ಅಭಿವೃದ್ಧಿ ಸೇರಿ ಸಮಾಜದಲ್ಲಿ ಶಾಂತಿ ಸೌಹಾರ್ಧತೆಗಾಗಿ ನಾವೆಲ್ಲರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿಬೇಕಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರಿನ ರಂಜಿತಾ ಪ್ಯಾಲೇಸ್ ನಲ್ಲಿ ಲೋಕಸಭೆ ಚುನಾವಣೆಯ ನಿಮಿತ್ಯ ಆಯೋಜಿಸಿದ್ದ ಮಾದಿಗ ಸಮುದಾಯದ ಪ್ರಮೂಖ ಮುಖಂಡರುಗಳ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುಂಚೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಾಲನೆ ನೀಡಲಾಯಿತು.
ಈ ಭಾಗದ ಜನರ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಸಮಸ್ಯೆಗಳ ಪರಿಹಾರ ಕ್ರಮ ಕೈಗೊಳ್ಳುವ ಶಕ್ತಿ ವಿದ್ಯಾವಂತರಾಗಿರುವ ಕುಮಾರ ನಾಯಕರಿಗಿದೆ. ಹಾಗಾಗಿ ನಮ್ಮ ಪಕ್ಷದಿಂದ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರನ್ನು ನಾವೆಲ್ಲರು ಬೆಂಬಲಿಸುವ ಮೂಲಕ ಆಶೀರ್ವದಿಸಬೇಕೆಂದು ಮಾತನಾಡಿದರು.
ನಂತರ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ ನಾಯಕ ಮಾತನಾಡಿ, ಈ ಭಾಗದ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಬಲವರ್ಧನೆಯ ಜೊತೆಗೆ ದೇಶದ ಪವಿತ್ರ ಗ್ರಂಥವಾದ ಸಂವಿಧಾನ ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮಲ್ಲಿರುವ ಸೌಹಾರ್ಧತೆಯನ್ನು ಕದಡುವ ಶಕ್ತಿಗಳ ವಿರುದ್ಧ ಹೋರಾಡಲು ಕಾಂಗ್ರೆಸ್ ಗೆ ಬೆಂಬಲಿಸಬೇಕಾಗಿದೆ. ಸ್ವತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಅದರದೆ ಆದ ಇತಿಹಾಸವಿದೆ. ಈ ಐತಿಕಾಸಿಕ ಹಿನ್ನಲೆಯುಳ್ಳ ಪಕ್ಷದಿಂದ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನಗೆ ಆಶೀರ್ವಾದ ಮಾಡುವ ಮೂಲಕ ಜನರ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಪ್ರಾಸ್ಥಾವಿಕವಾಗಿ ಕಾಂಗ್ರೆಸ್ ಮುಖಂಡರಾದ ಜಯಣ್ಣ ಮಾತನಾಡಿ, ಸಮುದಾಯ ಕ್ರಮೇಣ ರಾಜಕೀಯ ಅವಕಾಶಗಳಿಂದ ವಂಚಿತವಾಗುತ್ತಿದೆ. ಸಮಾಜದ ಆರ್ಥಿಕ ಸಾಮಾಜಿ, ಶೈಕ್ಷಣಿ, ರಾಜಕೀಯವಾಗಿ ಬೆಳವಣಿಗೆ ಹೊಂದಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕಾಗಿದೆ. ಅಂತೆಯೇ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಯಕ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಮಾತನಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳಾದ ರಾಮಣ್ಣ ಇರಬಗೇರಾ, ಹನುಮಂತಪ್ಪ ಕಾಕರಗಲ್ ಸೇರಿದಂತೆ ಅನೇಕರು ಮಾತನಾಡಿದರು. ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಜಯಣ್ಣ, ಕಿರಿಲಿಂಗಪ್ಪ, ಎಚ್.ಬಿ.ಮುರಾರಿ, ಹನುಮಂತಪ್ಪ ಕಾಕರಗಲ್, ಕೆ.ಆಂಜಿನೇಯ್ಯ, ಪವನ್ ಈರಣ್ಣ, ಮಾಡಗಿರಿ ನರಸಿಂಹಲು, ಬಾಲಸ್ವಾಮಿ ಕೊಡ್ಲಿ, ನಾಗರಾಜ, ಮರಿಸ್ವಾಮಿ, ಶಿವಪ್ಪ ಗೊಲ್ಲದಿನ್ನಿ, ಅಬ್ರಾಹಮ್ ಹೊನ್ನಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.