ದೇಶದ ಐಕ್ಯತೆ, ಸೌಹಾರ್ಧತೆಗಾಗಿ ಕಾಂಗ್ರೆಸ್‌ಗೆ ಬೆಂಬಲಿಸಿ
ರಾಯಚೂರು.ಏ.೧೨- ನಗರದ ರಂಜಿತಾ ಪ್ಯಾಲೇಸ್‌ನಲ್ಲಿ ಲೋಕಸಭೆ ಚುನಾವಣೆಯ ನಿಮಿತ್ಯ ಆಯೋಜಿಸಿದ್ದ ಚಲುವಾದಿ ಸಮುದಾಯದ ಪ್ರಮೂಖ ಮುಖಂಡರುಗಳ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ ನಾಯಕ ಅವರು ಭಾಗವಹಿಸಿ ಮತಯಾಚನೆ ಮಾಡಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪೀಟಿಕೆಯನ್ನು ಓದಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಮಲ್ಲೇಶ ಕೊಲುಮಿ, ಬಿ.ರಮೇಶ, ಮಂಚಾಲ ಭೀಮಣ್ಣ, ಜಗನ್ನಾಥ ಸುಂಕಾರಿ, ಸತ್ಯಪ್ಪ ಮಂಗಳವಾರ ಪೇಟೆ, ತಿಪ್ಪಣ್ಣ ಬಾಗಲವಾಡ, ರವಿ ಕುಮಾರ್, ಪ್ರಾಣೇಶ ಮಂಚಾಲ, ವಸಂತ ಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.