ದಿ.೧೭: ಬಿಜೆಪಿ ಪರ ಪವನ್ ಕಲ್ಯಾಣ್ ಪ್ರಚಾರ
ರಾಯಚೂರು,ಏ.೧೨- ಜನಸೇನಾ ಪಕ್ಷ ಸಂಸ್ಥಾಪಕ ಮತ್ತು ತೆಲುಗು ಚಲನಚಿತ್ರ ರಂಗದ ನಟ ಪವನ್ ಕಲ್ಯಾಣ್ ದಿ ೧೭ರಂದು ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ಪರ ಪ್ರಚಾರ ನಡೆಸಲಿದ್ದಾರೆ.
ದಿ.೧೭ ರಂದು ಯರಮರಸ್ ದಂಡು ಸರ್ಕ್ಯೂಟ್ ಹೌಸ್ ಬಳಿ ಇರುವ ಹೆಲಿಕಾಪ್ಟರ್ ಮೂಲಕ ಆಗಮಿಸುವ ಅವರು ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಭಾರೀ ಪ್ರಚಾರ ನಡೆಸಲಿದ್ದಾರೆ. ನಟ ಪವನ್ ಕಲ್ಯಾಣ ರೋಡ್ ಶೋ ದಿನದಂದು ಅವರ ಅಭಿಮಾನಿಗಳು ಸಾವಿರರು ಸಂಖ್ಯೆಯಲ್ಲಿ ಭಾಗವಹಿಸಿಲಿದ್ದಾರೆ ಎನ್ನಲಾಗಿದೆ.
ನಗರದ ಶ್ರೀ ಕನಕದಾಸ ವೃತ್ತದಿಂದ ಆರಂಭಗೊಳ್ಳುವ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ರೋಡ್ ಶೋ ಮೆರವಣಿಗೆ ಐದು ಕಿ.ಮೀ. ವರೆಗಿನ ಶ್ರೀ ಮಡಿವಾಳ ಮಾಚಿದೇವ ವೃತ್ತ ತಲುಪಿ ಕೊನೆಗೊಳ್ಳಲಿದೆ. ನಂತರ ಅಲ್ಲಿಂದ ಪುನಃ ಯರಮರಸ್ ದಂಡಿಗೆ ಆಗಮಿಸಿ ಬಳ್ಳಾರಿಯತ್ತ ಪ್ರಯಾಣ ಮಾಡಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.