ಮಂಜುಳಾದೇವಿ ವಿಜ್ಞಾನದಲ್ಲಿ ಶೇ.೯೨ ರಷ್ಟು ಫಲಿತಾಂಶ
ರಾಯಚೂರು,ಏ.೧೧- ಅರೇಕೆರಾ ತಾಲೂಕಿನ ನಾಗಡದಿನ್ನಿ ಗ್ರಾಮದ ರೈತ ರಂಗಣ್ಣ ಅವರ ಮಗಳು ಕೆ. ಮಂಜುಳಾದೇವಿ ದ್ವಿತೀಯ ವಾರ್ಷಿಕ ಪಿಯುಸಿ ಪರೀಕ್ಷೆಯಲ್ಲಿ ೬೦೦ ಅಂಕಗಳಿಗೆ ೫೫೪ ಪಡೆದು ಶೇ.೯೨ ರಷ್ಟು ಸಾಧನೆ ಮಾಡಿದ್ದಾಳೆ.
ರೈತ ರಂಗಣ್ಣ ಅವರ ಮಗಳು ರಾಯಚೂರಿನ ಬೆಸ್ಟ್ ಪ್ರಿ ಯೂನಿವರ್ಸಿಟಿ ಕಾಲೇಜುನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಕಾಲೇಜಿಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ಕೆ.ಮಂಜುಳಾದೇವಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಕಾಲೇಜಿಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿರುವ ಹಿನ್ನಲೆಯಲ್ಲಿ ತಂದೆ ರಂಗಣ್ಣ ಮತ್ತು ತಾಯಿ ಲಕ್ಷ್ಮಿ ದೇವಿ ಹಾಗೂ ಮಾವ ಗುಂಡಪ್ಪ ಮತ್ತು ಕವಿತಾ ಸೇರಿದಂತೆ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.ಊರಿನ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.