ಕುಡಿಯುವ ನೀರಿನ ವ್ಯವಸ್ಥೆ
ಗುಳೇದಗುಡ್ಡ,ಏ12: ಮನುಷ್ಯನಿಗೆ ಬೇಕಾಗಿರುವುದು ಅನ್ನ, ನೀರು ಮತ್ತು ಒಳ್ಳೆಯ ಕಾರ್ಯ. ಈಗ ಬಿಸಿಲು ಸಾಕಷ್ಟು ಇದ್ದು, ಇಲ್ಲಿ ಸಂಚರಿಸುವ ದಾರಿಹೋಕರಿಗೆ ಲಾಲ್ ಬಹದ್ದೂರು ಶಾಸ್ತ್ರೀ ಪತ್ತಿನ ಸಹಕಾರ ಸಂಘದಿಂದ ನೀರಿನ ಅರವಟಿಕೆ ಇಟ್ಟು ಉತ್ತಮ ಕಾರ್ಯಮಾಡಿದ್ದಾರೆ. ಬಾಯಾರಿಕೆಯನ್ನು ಹಿಂಗಿಸುವ ಕಾರ್ಯಮಾಡಿದ್ದು ಶ್ಲ್ಯಾಘನೀಯ ಎಂದು ಹಳಿಂಗಳಿ ಕಮರಿಮಠದ ಶ್ರೀ ಶಿವಾನಂದ ಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಲಾಲ್ ಬಹದ್ದೂರ ಶಾಸ್ತ್ರಿ ಬ್ಯಾಂಕ್‍ನ ವತಿಯಿಂದ ಹಮ್ಮಿಕೊಂಡಿದ್ದ ನೀರಿನ ಅರವಟಿಗೆ ಹಾಗೂ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕೇವಲ ಮನುಷ್ಯನಿಗೆ ಮಾತ್ರವಲ್ಲ ಪಕ್ಷಿ, ಪ್ರಾಣಿಗಳಿಗೂ ನೀರು ಒದಗಿಸುತ್ತಿರುವುದು ಶ್ಲ್ಯಾಘನೀಯ ಎಂದರು.
ಈ ಸಂದರ್ಭದಲ್ಲಿ ಮರಡಿ ಮಠದ ಶ್ರೀ ಕಾಡಸಿದ್ದೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು. ರಾಜು ತಾಪಡಿಯಾ, ಪ್ರಶಾಂತ ಜವಳಿ, ರಾಚಪ್ಪ ಸಾರಂಗಿ, ಸಂಗಪ್ಪ ಹಡಪದ, ಯಲ್ಲಪ್ಪ ಪವಾರ, ಸುನಂದಾ ಸತ್ತೀಗೇರಿ, ಆರ್.ಎಚ್. ಮಕಾನದಾರ, ಎಸ್.ಕೆ. ದಾರವಾಡ, ಭಾವನಾ ಅಲದಿ, ಸಾವಿತ್ರಿ ಪೂಜಾರ, ಶಿವಾನಂದ ಗೊಂಧಕರ ಮತ್ತಿತರರು ಇದ್ದರು.