ಗುಳೇದಗುಡ್ಡ: ಸಂಭ್ರಮದಿಂದ ರಂಜಾನ ಆಚರಣೆ
ಗುಳೇದಗುಡ್ಡ,ಏ.12: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಹೊರವಲಯದಲ್ಲಿರುವ ಈದಗಾ ಮೈದಾನದÀ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದರು. ಕುತುಬಾವನ್ನು ಧರ್ಮಗುರುಗಳಾದ ಹಜರತ್ ಅಬೂಬಕರ್ ಮೋಮಿನ್ ಮೌಲಾನಾ ಮುಪ್ತಿ ಅವರು ರಂಜಾನ್ ಹಬ್ಬದ ಸಂದೇಶಗಳನ್ನು ಹಾಗೂ ಅಲ್ಹಾನ ಪವಿತ್ರ ಸಂದೇಶಗಳನ್ನು ಉಪದೇಶಿಸಿದರು. ಅಲ್ಲದೇ ಬಿಸಿಲಿನ ತಾಪದಿಂದ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲಾಹನ ದಯೆದಿಂದ ಆದಷ್ಟು ಬೇಗ ಮಳೆಯಾಗಲಿ. ರೈತರಿಗೆ ಖುಷಿ ನೀಡಲಿ ಎಂದು ಪ್ರಾರ್ಥಿಸಿದರು.
ತಿಂಗಳು ಕಾಲ ಉಪವಾಸ ವೃತವನ್ನು ಕೈಗೊಂಡು ಉಪವಾಸದ ಕೊನೆಯ ದಿನ ರಂಜಾನ್ ಹಬ್ಬದಂದು ಉಪವಾಸ ಸಮಾಪ್ತಿಗೊಳಿಸಿ ಪರಸ್ಪರ ಶುಭ ಕೋರಿದರು. ಈ ಸಂದರ್ಭದಲ್ಲಿ ಅಂಜುಮನ್ ಸಮಿತಿಯ ಅಧ್ಯಕ್ಷ ಕೆ.ಆರ್.ರಾಯಚೂರ, ಉಪಾಧ್ಯಕ್ಷ ಜಮೀರ್ ಮೌಲ್ವಿ, ಕಾರ್ಯದರ್ಶಿ ಎಚ್.ಎಂ.ಸಾಧನಿ, ಸಮಾಜ ಬಾಂಧವರಾದ ರಫೀಕ್ ಕಲಬುರ್ಗಿ, ಕಾಸೀಮಸಾಬ್ ಅಮೀನಗಡ, ಮುಸ್ತಾಕ ಹೊನವಾಡ, ಸಮೀರ್ ಡಾಲಾಯತ್, ಕೆ.ಎಂ.ಕೊತ್ತಲ, ಲಾಲಸಾಬ್ ಇಲಕಲ್ ಸೇರಿದಂತೆ ಇನ್ನೂ ಅನೇಕರು ಇದ್ದರು.