ಉಮ್ಮತ್ತೂರು ಚಂದ್ರುಗೆ ಶ್ರೀ ಸಿದ್ದಗಂಗಾ ಸಿರಿ ಪ್ರಶಸ್ತಿ ಪ್ರದಾನ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.12:- ಮೈಸೂರಿನ ಶ್ರೀ ಬಸವೇಶ್ವರ ಸಾಂಸ್ಕøತಿಕ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ಬಾರಿಯು ಸಹ ನಡೆದಾಡುವ ದೇವರು ಎಂದೇ ಖ್ಯಾತಿಯಾಗಿದ್ದ ಡಾ. ಶ್ರಿ ಶಿವಕುಮಾರಸ್ವಾಮಿಗಳ 117 ಜಯಂತಿಯಂದು ಸಮಾಜ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಉಮ್ಮತ್ತೂರು ಚಂದ್ರು ಅವರನ್ನು ಗುರುತಿಸಿ ಶ್ರೀ ಸಿದ್ದಗಂಗಾ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮೈಸೂರಿನ ಕೃಷ್ನಮೂರ್ತಿ ಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿ ನಡೆದ ಸಿದ್ದಗಂಗಾ ಶ್ರೀಗಳ ಜಯಂತಿ ಕಾರ್ಯಕ್ರಮವನ್ನು ಸಾಹಿತಿ ಬನ್ನೂರು ಕೆ.ರಾಜು ಅವರು ಉದ್ಘಾಟಿಸಿ, ಸಿದ್ದಗಂಗಾಶ್ರೀಗಳ ಸೇವೆಯನ್ನು ಗುಣಗಾನ ಮಾಡಿದರು. ಹಿರಿಯ ಸಮಾಜ ಸೇವಕ ಡಾ.ಕೆ. ರಘರಾಂವಾಜಪೇಯಿ ಅವರು ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಮಾಜ ಸೇವೆಯಿಂದ ಚಾ.ನಗರ ಉಮ್ಮತ್ತೂರು ಚಂದ್ರು, ಶಿಕ್ಷಣ ಕ್ಷೇತ್ರದಿಂದ ಎಚ್.ವಿ. ಮುರುಳೀಧರ್, ಸಾರ್ವಜನಿಕ ಸೇವಾ ಕ್ಷೇತ್ರದಿಂದ ರಾಮದಾಸ್, ಉದ್ಯಮ ಕ್ಷೇತ್ರದಿಂದ ಟಿ.ಎಂ. ರವಿಕುಮಾರ್, ಕಲಾ ಕ್ಷೇತ್ರದಿಂದ ಸುರೇಶ್ ಗೌಡ, ಸಮಾಜ ಸೇವಾ ಕ್ವ್ಷೇತ್ರದಿಂದ ರುಕ್ಷೀಣಿ ಅವರಿಗೆ ಶ್ರೀ ಸಿದ್ದಗಂಗಾ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರಸ್ವಾಮಿ, ಮಹಾಸಭಾದ ಕೋಶಾಧ್ಯಕ್ಷ ವರುಣಾ ಮಹೇಶ್, ಚಲನ ಚಿತ್ರ ನಾಯಕ ನಟ ಸುಪ್ರೀತ್, ಸಾಹಿತಿ ಡಾ. ಕೆ. ಲೀಲಾ ಪ್ರಕಾಶ್, ಉದ್ಯಮಿ ಮಣಿಕಂಠ, ಕನ್ನಡ ಸಾಹಿತಯ್ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.