ನಗರದಲ್ಲಿ ಸಂಭ್ರಮದ ರಂಜಾನ್: ಎಂ.ಲಕ್ಷ ್ಮಣ್ ಮತಯಾಚನೆ
ಸಂಜೆವಾಣಿ ನ್ಯೂಸ್
ಮೈಸೂರು: ಏ.12:- ಸಾಂಸ್ಕೃತಿಕ ನಗರಿ ಮೈಸೂರಿನಾದ್ಯಂತ ಸಂಭ್ರಮದ ರಂಜಾನ್ ಹಬ್ಬವನ್ನು ಆಚರಿಸಲಾಯಿತು.
ಮುಂಜಾನೆಯೇ ಮುಸ್ಲಿಂ ಬಾಂಧವರು ಈದ್ಗಾ, ಶಾಂತಿನಗರ, ರಾಜೀವ್ ನಗರ ಸೇರಿ ಅನೇಕ ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ಪರಸ್ಪರ ಶುಭಕೋರುವ ಮೂಲಕ ಒಂದು ತಿಂಗಳ ಉಪವಾಸ ಅಂತ್ಯಗೊಳಿಸಿದರು.
ಕೈ ಅಭ್ಯರ್ಥಿಯಿಂದ ಭೇಟಿ: ಮೈಸೂರು ಕೊಡಗು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಎಂ ಲಕ್ಷ್ಮಣ, ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ,ಈದ್ ಉಲ್ ಫಿತ್ರು, ಮುಸಲ್ಮಾನ್ ಸಮುದಾಯದವರು ಪ್ರಾರ್ಥನೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು.
ಅವರು ಮಾತನಾಡಿ ಒಂದು ತಿಂಗಳು ಕಾಲ ಉಪವಾಸ ಮಾಡಿ ರಂಜಾನ್ ಹಬ್ಬ ಮಾಡುತ್ತಿದ್ದೀರಾ. ಎಲ್ಲರಿಗೂ ಹಬ್ಬದ ಶುಭಾಶಯಗಳು ಭಾರತದಲ್ಲಿರುವ ಎಲ್ಲರೂ ಒಂದೇ ಎಲ್ಲರಲ್ಲೂ ಸಮಾನ ಭ್ರಾತೃತ್ವ ಭಾವನೆ ಇರಬೇಕು. ಹಿಂದೂ ಮತ್ತು ಮುಸ್ಲಿಮರು ಸೇರಿ ಒಟ್ಟಾಗಿ ಹಬ್ಬವನ್ನು ಆಚರಣೆ ಮಾಡೋಣ. ಎಲ್ಲಾ ಧರ್ಮದವರು ಒಂದಾಗಿ ಅಣ್ಣ ತಮ್ಮಂದಿರ ತರ ಸಮಾಜದಲ್ಲಿ ಬದುಕ ಬೇಕು. ಎ ಸಮಾಜ ದಲ್ಲಿ ಶಾಂತಿಯಿಂದ ಬಾಳ ಬೇಕು ಎಂದು ಹೇಳಿ 26 ರಂದು ತಪ್ಪದೆ ಮತ ನೀಡಬೇಕೆಂದು ಕೇಳಿ ಕೊಂಡರು.
ಇದೆ ಸಂದರ್ಭದಲ್ಲಿ ಮೈಸೂರಿನ ಸರ್ ಖಾಜಿ ಹಜರತ್ ಮೌಲಾನಾ ಅಲ್ ಹಾಜ್ ಮೊಹಮದ್ ಉಸ್ಮಾನ್ ಶರೀಫ್ ರವರು ಲಕ್ಷ್ಮಣ ರವರು ಗೆದ್ದೆ ಗೆಲ್ಲುತ್ತೀರೆ ಎಂದು ಬೆಂಬಲ ನೀಡಿ ಆಶೀರ್ವಾದಿಸಿದರು.