ನಗದು ಹಣ ವ್ಯವಹಾರಕ್ಕೆ ಒಂದೇ ಕೌಂಟರ್: ಗಂಟೆ ಗಟ್ಟಲೆ ನಿಲ್ಲುವ ಪರಿಸ್ಥಿತಿ
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ.ಏ.12:- ಎಸ್.ಬಿ.ಐ ಬ್ಯಾಂಕ್ ವ್ಯವಹಾರಕ್ಕೆ ಬರುವ ಗ್ರಾಹಕರು ಬ್ಯಾಂಕಿಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಕಾರ್ಯಗ ಳಿಗೆ ಗಂಟೆ ಗಟ್ಟಲೆ ಕಾದು ದಿನ ಪೂರ್ತಿ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇದರಿಂದ ಬೇಸತ್ತ ಸಾರ್ವಜನಿ ಕರು ಅಸಮಾಧಾನ ವ್ಯಕ್ತಪಡಿಸಿ ದ್ದಾರೆ.
ತಾಲೂಕಿನ ಕಾಮಗೆರೆ ಗ್ರಾಮದ ಎಸ್.ಬಿ.ಐ ಬ್ಯಾಂಕ್ ಕಚೇರಿ ಯಲ್ಲಿ ನಗದು ಹಣ ಕಟ್ಟಲು ಹಾಗೂ ಕೊಂಡುಕೊಳ್ಳುವುದಕ್ಕೆ ಒಂದೇ ಕೌಂಟರ್ ಇರುವುದ ರಿಂದ ಗ್ರಾಹಕರು ಗಂಟೆಗಟ್ಟಲೆ ನಿಲ್ಲುವಂತಹ ಪರಿಸ್ಥಿತಿಯಾಗಿದೆ.
ವೃಯೋವೃದ್ಧರು ಶಾಲಾ ಕಾಲೇಜು ವಿದ್ಯಾರ್ಥಿಗಳು ಮಕ್ಕಳು ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುವುದು ಅಥವಾ ಕೊಂಡುಕೊಳ್ಳುವುದಕ್ಕೆ ಸಾರಥಿ ಸಾಲಿನಲ್ಲಿ ನಿಂತರು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿಲ್ಲಬೇಕಾದ ಪರಿಸ್ಥಿತಿ ಇಲ್ಲಿನ ಸಮಸ್ಯೆಯಾಗಿದೆ.
ಎಸ್.ಬಿ.ಐ ಬ್ಯಾಂಕ್ ವ್ಯವಹಾರಕ್ಕೆ ಬರುವ ಗ್ರಾಹಕರು ನಗದು ಹಣ ಕಟ್ಟಲು ಹಾಗೂ ಪಡೆದುಕೊಳ್ಳಲು ಒಂದೇ ಕೌಂಟರ್ ಇರುವುದರಿಂದ ಹೆಚ್ಚಿನ ಸಮಯ ಕ್ಯೂನಲ್ಲೇ ನಿಲ್ಲುವಂತಾಗಿದೆ. ಇದರಿಂದ ಒಂದು ದಿನನಿತ್ಯ ಬ್ಯಾಂಕಿಂಗ್ ವ್ಯವಹಾರಕ್ಕೆ ಸಮಯ ಕಳೆಯುವಂತಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಹೆಚ್ಚಿನ ಕೌಂಟರ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿ ಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.