5440 ರೂ ಮೌಲ್ಯದ ಅಕ್ರಮ ಮದ್ಯ ವಶ
ಚಿಂಚೋಳಿ,ಏ.11: ತಾಲೂಕಿನ ಜಂಗ್ಲಿಪೀರತಾಂಡಾದಲ್ಲಿ ಅಕ್ರಮವಾಗಿ ಸಂಗ್ರಹಿಸಿದ 5440 ರೂ ಮೌಲ್ಯದ ಮದ್ಯ ಹಾಗೂ ಬೀಯರ್ ಅನ್ನು ಅಬಕಾರಿ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಜಂಗ್ಲಿಪೀರ ತಾಂಡಾದ ಬಲಭೀಮ ತಂದೆ ಶೇಟ್ಟಿ ರಾಠೋಡ ಆರೋಪಿ.ಅಬಕಾರಿ ದಾಳಿಯಲ್ಲಿ 10.260 ಲೀ ಮದ್ಯ ಮತ್ತು 2.640 ಲೀ ಬೀಯರ್ ವಶಪಡಿಸಿಕೊಂಡು ದಾಳಿ ಕಾಲಕ್ಕೆ ತಲೆಮರೆಸಿಕೊಂಡ ಆರೋಪಿಯ ವಿರುಧ್ದ ಚಿಂಚೋಳಿ ವಲಯದ ಅಬಕಾರಿ ಉಪ ನಿರೀಕ್ಷಕರು-2 ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸದ್ದಾರೆ.ದಾಳಿಯಲ್ಲಿ ಸಿಬ್ಬಂದಿಗಳಾದ ಕಲ್ಲಯ್ಯ ಮಠಪತಿ, ಗೌತಮಬುದ್ಧ, ವಾಹನ ಚಾಲಕ ಗುರುನಾಥ ಇದ್ದರು