ದ್ವಿತೀಯ ಪಿಯುಸಿ:ಶ್ರೀ ಗುರು ಕಾಲೇಜಿಗೆ ಶೇ.99.70 ಫಲಿತಾಂಶ
ಕಲಬುರಗಿ,ಏ 11: ದಿ. ಪ್ರೊ.ಎ.ವೈ.ನಾಯ್ಕ್ ಅವರ ಕೃಪಾಶೀರ್ವಾದದಿಂದ 2023-24ನೇ ಶೈಕ್ಷಣಿಕ ಸಾಲಿನ ದ್ವ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ ಮಾರ್ಚ್-1, -2024ರಲ್ಲಿ ನಗರದ ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ರಂಗದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದು ಕೊಟ್ಟಿದ್ದಾರೆ. ಕಾಲೇಜಿನ ಸರಾಸರಿ ಫಲಿತಾಂಶವು ಶೇ.99.70 ಆಗಿದೆ.
ಮಹ್ಮದ ರಿಯಾನ್ ಅಬ್ದುಲ್ ರಜಾಕ 591(600) (ಶೇ.98.5) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಈ ವಿದ್ಯಾರ್ಥಿ ಫಿಸಿಕ್ಸ್ 98,ಕೆಮಿಸ್ಟ್ರಿ 100,ಗಣಿತ 100,ಬಯಾಲಜಿ 100,ಹಿಂದಿ 98 ಮತ್ತು ಇಂಗ್ಲೀಷ್‍ನಲ್ಲಿ 95 ಅಂಕ ಪಡೆದಿದ್ದಾನೆ.416 ವಿದ್ಯಾರ್ಥಿಗಳು ಅಗ್ರಶ್ರೇಣಿ ಪಡೆದಿದ್ದಾರೆ.
ಭೌತಶಾಸ್ತ್ರ -2,ರಸಾಯನ ಶಾಸ್ತ್ರ – 18,ಗಣಿತಶಾಸ್ತ್ರ-7, ಜೀವಶಾಸ್ತ್ರ-11.ಕಂಪ್ಯೂಟರ್ ಸೈನ್ಸ್ – 3,ಎಲೆಕ್ಟ್ರಾನಿಕ್ಸ್- 2 ಮತ್ತು ಕನ್ನಡದಲ್ಲಿ -1 ವಿದ್ಯಾರ್ಥಿಗಳು 100ಕ್ಕೆ 100ರಷ್ಟು ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ನಳಿನಿ ಎ.ನಾಯ್ಕ್, ಕಾರ್ಯದರ್ಶಿಗಳಾದನಿತೀನ ಎ. ನಾಯ್ಕ್ ಆಡಳಿತಾಧಿಕಾರಿಗಳಾದ ನೆಹಾ ಎನ್.ನಾಯ್ಕ್ ಮತ್ತು ಗುರುರಾಜ ಎ.ನಾಯ್ಕ್ ಹಾಗೂ ಪ್ರಾಚಾರ್ಯರಾದ ವಿದ್ಯಾಸಾಗರ ಎಂ. ಗೋಗಿ ಮತ್ತು ಕಾಲೇಜಿನ ಬೋಧಕ ಬೋಧಕೇತರ ವರ್ಗ, ಆಡಳಿತ ಮಂಡಳಿಯ ವತಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಉಪನ್ಯಾಸಕರ ಸಮರ್ಥ ಮಾರ್ಗದರ್ಶನ,ಸಂಘಟಿತ ಪ್ರಯತ್ನ,ವಿದ್ಯಾರ್ಥಿಗಳ ಪರಿಶ್ರಮದಿಂದ ಈ ಸಾಧನೆ ಲಭಿಸಿದೆ.
ಸಾಧನೆ ತೋರಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ.ಅವರ ಭವಿಷ್ಯ ಉಜ್ವಲವಾಗಲಿ ಎಂದು ಸಂಸ್ಥೆಯ ಪರವಾಗಿ ಹಾರೈಕೆಗಳು.
_ನಿತೀನ ಎ. ನಾಯ್ಕ್, ಕಾರ್ಯದರ್ಶಿ
ಶ್ರೀ ಗುರು ವಿಜ್ಞಾನ ಪದವಿಪೂರ್ವಕಾಲೇಜು
ಕಲಬುರಗಿ.