ಗುರು ನಾನಕ ಪಿಯು ಕಾಲೇಜ್‍ಗೆ 99 ಪ್ರತಿಶತ ಫಲಿತಾಂಶ
ಬೀದರ:ಏ.11:ಪ್ರತಿಷ್ಠಿತ ಗುರು ನಾನಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 2023-24 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದು, ಒಟ್ಟು 303 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ಅಗ್ರಶ್ರೇಣಿಯಲ್ಲಿ 100 ವಿದ್ಯಾರ್ಥಿಗಳು, 203 ವಿದ್ಯಾರ್ಥಿಗಳು ಪ್ರಥಮ ದರ್ಜೇಯಲ್ಲಿ ಉತ್ತೀರ್ಣರಾಗಿ ಗಮನ ಸೆಳೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಎನ್.ಮೆಥ್ಯೋಸಿಲ್ಹಾ 96.67%, ಪಲ್ಲವಿ 95%, ಕಾರ್ತೀಕ 94.33%, ವಿಕ್ಟರ್ ರಾಜ್ 94%, ಕಿರಣ 93.33%, ಖುಷಿ ಭೂರೆ 93%, ಸಲ್ಮಾನ ಪಟೇಲ್ 92.50%, ವಿನಯ ಕುಮಾರ 92.50%, ನಂದಿನಿ 92.33%, ಶ್ರೀಕಾಂತ ಸ್ವಾಮಿ 92%, ಪಡೆದರೆ ವಾಣಿಜ್ಯ ವಿಭಾಗದಲ್ಲಿ ಸಿದ್ದಿ ಮಲಾನಿ 96.33%, ಹಣಮಂತ ವಿಜಯಕುಮಾರ 93.33% ಮತ್ತು ವಿಜಯಕುಮಾರ ಧನಶೆಟ್ಟಿ 93.33% ಪಡೆದಿರುತ್ತಾರೆ.
ಈ ಮಕ್ಕಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ|| ಎಸ್. ಬಲಬೀರ ಸಿಂಗ್ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್, ಪ್ರಾಂಶುಪಾಲರಾದ ಡಾ|| ವಿಕ್ರಮ ಸಿಂಗ್ ತೋಮರ್ ಮತ್ತು ಉಪನ್ಯಾಸ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಕ್ಕಾಗಿ ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.