ದೈನಂದಿನ ಒತ್ತಡದಿಂದ ಮುಕ್ತರಾಗಲು ಕ್ರೀಡೆಯಲ್ಲಿ ಭಾಗವಹಿಸಬೇಕು
ಸೈದಾಪುರ:ಏ.11:ಕ್ರೀಡೆಯು ದೇಹವನ್ನು ಗಟ್ಟಿಗೊಳಿಸುತ್ತದೆ. ಮನಸ್ಸಿಗೆ ಉಲ್ಲಾಸ, ಉತ್ಸಾಹ ನೀಡುತ್ತದೆ. ಆದ್ದರಿಂದ ದೈನಂದಿನ ಒತ್ತಡದಿಂದ ಮುಕ್ತರಾಗಲು ನಿತ್ಯ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಗ್ರಾಮದ ಯುವ ಮುಖಂಡ ಚಂದ್ರಶೇಖರಗೌಡ ಹೆಗ್ಗಣಗೇರಾ ಅಭಿಪ್ರಾಯಪಟ್ಟರು.
ಸಮೀಪದ ಹೆಗ್ಗಣಗೇರಾ ಗ್ರಾಮದಲ್ಲಿ ಅಪ್ಪು ಸ್ಮರಣಾರ್ಥ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಹೆಗ್ಗಣಗೇರಾ ಸೀಜನ್-3 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳು ಮನುಷ್ಯನನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರುವಂತೆ ಮಾಡುತ್ತವೆ. ಸ್ವಾಮಿ ವಿವೇಕಾನಂದರ ಅಭಿಪ್ರಾಯದಂತೆ ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಎಂಬುದು ಅಕ್ಷರಶಃ ಸತ್ಯವಾಗಿದೆ. ಕ್ರೀಡೆ ದೈಹಿಕವಾಗಿ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮನಸ್ಸು ಮತ್ತು ದೇಹ ಎರಡರ ಮೇಲೂ ಭಾರಿ ಧನಾತ್ಮಕ ಪರಿಣಾಮ ಬೀರುತ್ತವೆ ಎಂದು ಹೇಳಿದರು.
ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನಗಳಿಸಿದ ವೀರ ಸಾವರ್ಕರ್ ಬಾಯ್ಸ್ ತಂಡಕ್ಕೆ ದಿ.ಶರಣಪ್ಪ ಗೌಡ ತುಮಕೂರು ಹೆಗ್ಗಣಗೇರಾ ಇವರ ಸ್ಮರಣಾರ್ಥ ವಾಗಿ ಚಂದ್ರಶೇಖರಗೌಡ ತುಮಕೂರು ಇವರು 5555ರೂ. ನಗದು ಬಹುಮಾನ ಮತ್ತು ಕಪ್ ವಿತರಣೆ ಮಾಡಿದರು. ದ್ವಿತೀಯ ಬಹುಮಾನಗಳಿಸಿದ ಭಗತ್ ಸಿಂಗ್ ಬಾಯ್ಸ್ ತಂಡಕ್ಕೆ ದಿ. ಈಶ್ವರಪ್ಪ ಗೌಡ ತುಮಕೂರು ಇವರ ಸ್ಮರಣಾರ್ಥವಾಗಿ ಬಸರೆಡ್ಡಿ ಗೌಡ ತುಮಕೂರು ಅವರ 3501ರೂ. ಹಾಗೂ ಕಪ್ ವಿತರಣೆ ಮಾಡಿದರು. ಅದರಂತೆ ಪ್ರತಿಯೊಂದು ತಂಡದ ಆಟಗಾರರಿಗೆ ಐಎನ್‍ಎಸ್ ಸ್ನೇಹಿತರ ಬಳಗದ ವತಿಯಿಂದ ಆಟಗಾರರಿಗೆ ಟಿ ಶರ್ಟ್ ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ, ಬಸರೆಡ್ಡಿಗೌಡ ಹೆಗ್ಗಣಗೇರಾ, ಹಣಮಂತ್ರಾಯ ಗೌಡ ಕುಸುಮೂರ್ತಿ, ಬಸವರಾಜಪ್ಪಗೌಡ ಮಾಲಿ ಪಾಟೀಲ, ದೇವಪ್ಪಗೌಡ, ಹಿಮಾಮ್ ಸಾಬ್, ಲಚಮರೆಡ್ಡಿ ಕಲಾಲ್, ದೊಡ್ಡ ಹಣಮಂತ ಹಜ್ಜೆರಿ, ಗಾಲೆಪ್ಪ ಕಾಲಾಲ, ಮಲ್ಲಿಕರ್ಜುನ ಬ್ಯಾಗಾರ್, ಭೀಮಯ್ಯ ಕಲಾಲ್ ಮತ್ತು ಗ್ರಾಮದ ಹಿರಿಯ ನಾಯಕರು ಹಾಗೂ ಯುವಕರು ಮತ್ತು ಎಲ್ಲ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.