ಗೌಳಿ ಗಲ್ಲಿಯಲ್ಲಿ ಭವಾನಿ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ
ಬೀದರ್: ಏ.11:ನಗರದ ಓಲ್ಡ್ಸಿಟಿಯಲ್ಲಿರುವ ಗೌಳಿಗಲ್ಲಿಯಲ್ಲಿ ಈಚೆಗೆ ಭವಾನಿ ಮಾತೆ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಬಿಜೆಪಿಯ ಹಿರಿಯ ನಾಯಕ ಈಶ್ವರಸಿಂಗ್ ಠಾಕೂರ್ ಅವರು ಭೂಮಿಪೂಜೆ ನೆರವೇರಿಸಿದರು. ಮಂದಿರ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮಂದಿರ ನಿರ್ಮಾಣ ಕುರಿತಂತೆ ಗೌಳಿ ಸಮಾಜಬಾಂಧವರು ಹಿಂದೆಯೇ ಮಾಹಿತಿ ನೀಡಿದ್ದರು. ಸಾಧ್ಯವಾದಷ್ಟು ಬೇಗ ಭವಾನಿ ಮಾತೆ ಮಂದಿರ ನಿರ್ಮಾಣವಾಗಲಿ. ಈ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುತ್ತೇನೆ ಎಂದು ಈಶ್ವರಸಿಂಗ್ ಠಾಕೂರ್ ಹೇಳಿದರು.
ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಗೌಳಿ ಸಮಾಜದ ಅಧ್ಯಕ್ಷ ವಿಠಲರಾವ್ ಧುಳೆ, ಸಮಾಜದ ಪ್ರಮುಖರಾದ ಗಂಗಾರಾಮ ಬೀಡಕರ್, ರಕಮಾಜಿ ಬೋರಿವಾಡೆ, ಲಕ್ಷ??ಣ ಬೀಡಕರ್, ನರೇಶ ಧುಳೆ, ದಿಲೀಪ್ ಗೋಂಧಳಿ, ಬಾಬುರಾವ ಬೀಡಕರ್, ಪ್ರಕಾಶ ಅಂಜಿಖಾನೆ, ವಿಜಯ ತಪಸೆ, ನಾನಪ್ಪ ಗೋಂಧಳಿ ಮತ್ತಿತರ ಗಣ್ಯರು, ಗೌಳಿ ಸಮಾಜದ ಹಿರಿಯರು, ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.