ನವಭಾರತ ಕಾಲೇಜಿನ ವಿದ್ಯಾರ್ಥಿ ಜೇವರ್ಗಿ ತಾಲೂಕಿಗೆ ಟಾಪರ್
ಜೇವರ್ಗಿ ; ಏ.11:ತಾಲೂಕಿನ ಪ್ರತಿಷ್ಠಿತ ನವಭಾರತ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯಾದ ಭವಾನಿ ಗೌನಳ್ಳಿ 600 ಕ್ಕೆ 584 ಅಂಕ (97.33%) ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಾಜೀದ ಸೇಠ ಅವರು ವಿದ್ಯಾರ್ಥಿ ಸಾಧನೆಗೆ
ಹರ್ಷ ವ್ಯಕ್ತಪಡಿಸಿದರು.
ಬಡತನದಲ್ಲಿ ಓದುವ ಛಲ ಹೊಂದಿದ ಭವಾನಿ ಅವರಿಗೆ ನವಭಾರತ ಶಿಕ್ಷಣ ಸಂಸ್ಥೆ ಪ್ರಥಮ ಪಿಯುಸಿಯಲ್ಲಿ ಉಚಿತವಾಗಿ ಪ್ರವೇಶ ನೀಡಿ ಬಡ ವಿದ್ಯಾರ್ಥಿನಿ ಬಾಳಿಗೆ ಬೆಳಕಾಗಿದ್ದರ ಫಲವಾಗಿ ಇಂದು ಅಮೋಘ ನನಗೆ ಈ ಮಟ್ಟದ ಸಾಧನೆ ಮಾಡಲು ನವಭಾರ ಶಿಕ್ಷಣ ಸಂಸ್ಥೆಯ ನೀಡಿದ ಸಹಕಾರಕ್ಕೆ ಸಂಸ್ಥೆಯ ಅಧ್ಯಕ್ಷರಿಗೆ, ಪ್ರಾಂಶುಪಾಲರಿಗೆ ಹಾಗೂ ಸರ್ವ ಪ್ರಾಚಾರ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿದ್ಯಾರ್ಥಿ ಭವಾನಿ ಗೌನಳ್ಳಿ ತಿಳಿಸಿದರು.
ನವಭಾರತ ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 62 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆದಿದ್ದು, ಅಲ್ಪೀಯಾ 93.81%, ಮಲ್ಲಮ್ಮ 93. 50% ಅಂಕ ಪಡೆದಿದ್ದು, 20 ಡಿಂಸ್ಟಿಕ್ಷನ್, 40 ಪ್ರಥಮ ಶ್ರೇಣಿ, 02 ದ್ವೀತಿಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಾಜೀದಸೇಠ್ ಗಿರಣಿ ಹಾಗೂ ಪ್ರಾಚಾರ್ಯ, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.