ಭಕ್ತರ ರಕ್ಷಕ ಚನ್ನಮಲ್ಲೇಶ್ವರರು
ಚಿಟಗುಪ್ಪ: ಏ.11:ಚನ್ನಮಲ್ಲೇಶ್ವರ ಮೇಲೆ ಭಕ್ತರು ಶ್ರದ್ಧೆಯಿಂದ ಪೂಜಿಸಿದರೆ ನಮ್ಮ ಇಷ್ಟಾರ್ಥಗಳು ಸಿದ್ಧಿ ಆಗುತ್ತವೆ ಎಂದು ಇಟಗಾ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ತಾಲೂಕಿನ ಇಟಗಾ ವಿರಕ್ತ ಮಠ ಚನ್ನಮಲ್ಲೇಶ್ವರರ ಪಲ್ಲಕ್ಕಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದರು. ಇಟಗಾ ಗ್ರಾಮ ಶ್ರೀ ಗುರುಭದ್ರೇಶ್ವರ ಹಾಗೂ ಚೆನ್ನಮಲ್ಲೇಶ್ವರರ ನೆಲೆಸಿದ್ದ ಪವಿತ್ರವಾದ ಗ್ರಾಮವಾಗಿದೆ ಶಿವರಾತ್ರಿ ಮಹೋತ್ಸವದಂದು ಗ್ರಾಮದಲ್ಲಿ ರಥೋತ್ಸವ ಜರುಗಿದರೆ ಯುಗಾದಿ ಹೊಸ ವರ್ಷದಲ್ಲಿ ಚೆನ್ನಮಲ್ಲೇಶ್ವರರ ಪಲ್ಲಕ್ಕಿ ಉತ್ಸವವನ್ನು ಮಂಗಳವಾರ ಸಂಜೆ 7.30ಕ್ಕೆ ದೇವಸ್ಥಾನದಿಂದ ಜರುಗಿ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮರುದಿನ ಬೆಳಿಗ್ಗೆ ಪಲ್ಲಕ್ಕಿ ದೇವಸ್ಥಾನಕ್ಕೆ ತಲುಪುತ್ತದೆ ಎಂದರು. ಭರತನೂರು ಮಠದ ಚಿಕ್ಕ ಗುರು ನಂಜೇಶ್ವರರು ಮಾತನಾಡಿ ಗ್ರಾಮದ ಅತ್ಯಂತ ಪುರಾತನವಾಗಿರುವ ಚೆನ್ನಮಲ್ಲೇಶ್ವರರು ಈ ಗ್ರಾಮದ ರಕ್ಷಕರಾಗಿದ್ದಾರೆ ಭಕ್ತರ ಕಷ್ಟಗಳು ನಿವಾರಿಸಲು ಪವಾಡ ಪುರುಷರಾಗಿದಾರೆ ಎಂದರು. ಶಂಭುಲಿಂಗ ಶಿವಾಚಾರ್ಯರು ಮಾತನಾಡಿದರು. ಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ ಮಾತನಾಡಿ ನನ್ನ ಮತ ಕ್ಷೇತ್ರದ ಇಟಗಾ ಗ್ರಾಮ ಪವಿತ್ರ ಗ್ರಾಮವಾಗಿದೆ ಇಲ್ಲಿನ ಜನರು ಧಾರ್ಮಿಕದಲ್ಲಿ ಅಪಾರ ಶ್ರದ್ಧೆ ಭಕ್ತಿ ಉಳ್ಳವರಾಗಿದ್ದಾರೆ ಎಂದರು. ಇದೆ ವೇಳೆ ಭಕ್ತರು ಚೆನ್ನಮಲ್ಲೇಶ್ವರರ ಪವಾಡ ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಪಂಚ ಕಮಿಟಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಇಟಗಾ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ದೇವರ ದರ್ಶನ್ ಪಡೆದರು.