ಉಡಚಾಣ ಗ್ರಾಮದಲ್ಲಿ ಅಕ್ರಮ ಮರಳು ಜಪ್ತಿ17 ಲಕ್ಷ ಮೌಲ್ಯದ 855 ಟ್ರ್ಯಾಕ್ಟರ್ ಮರಳು ಜಪ್ತಿ
ಅಫಜಲಪುರ:ಏ.11: ಭೀಮಾ ನದಿ ದಂಡೆಯ ಉಡಚಾಣ ಗ್ರಾಮದ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳು ದಾಸ್ತಾನುಗಳ ಮೇಲೆ ಅಫಜಲಪುರ ಪೆÇಲೀಸರು ದಿಢೀರ್ ದಾಳಿ ನಡೆಸಿ ಅಕ್ರಮ ಮರಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏಪ್ರಿಲ್ 9ರಂದು ಅಕ್ರಮ ಮರಳು ಸಂಗ್ರಹ ಬಗ್ಗೆ ಅಫಜಲಪುರ ಪೆÇೀಲಿಸ್ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೆÇೀಲಿಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ, ಹೆಚ್ಚುವರಿ ಪೆÇಲೀಸ್ ಅಧೀಕ್ಷಕರಾದ ಶ್ರೀನಿಧಿ, ಡಿವೈಎಸ್ಪಿ ಮಹಮ್ಮದ್ ಶರೀಫ್ ರಾವುತರ್ ಮಾರ್ಗದರ್ಶನದಲ್ಲಿ ಸಿಪಿಐ ಚನ್ನಯ್ಯ ಹಿರೇಮಠ, ಪಿಎ??? ಮಹೆಬೂಬ ಅಲಿ, ಸಿಬ್ಬಂದಿಗಳಾದ ಶಿವಪ್ಪ, ಸಂತೋಷ, ವಿಶ್ವನಾಥ, ಇಮಾಮ್, ಗಿರೀಶ್, ಸೋಪಾನ, ಮಲ್ಲಿನಾಥ, ಚಂದ್ರಕಾಂತ, ರಾಜಶೇಖರ ತಂಡದೊಂದಿಗೆ ಅಫಜಲಪುರ ಪೆÇೀಲಿಸ್ ಠಾಣೆ ವ್ಯಾಪ್ತಿಯ ಭೀಮಾನದಿ ದಡದಲ್ಲಿರುವ ಉಡಚಾಣ ಗ್ರಾಮದ ವಿವಿಧ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳು ದಾಸ್ತಾನುಗಳ ಮೇಲೆ ದಾಳಿ ನಡೆಸಿ ಅಂದಾಜು 17 ಲಕ್ಷ 10 ಸಾವಿರ ಮೌಲ್ಯದ ಒಟ್ಟು 855 ಟ್ರಾಕ್ಟರ್ ಗಳಷ್ಟು ಮರಳನ್ನು ಜಪ್ತಿ ಮಾಡಿಕೊಂಡು ಜಮೀನುಗಳ ಮಾಲೀಕರಾದ 14 ಜನ ಆರೋಪಿತರ ವಿರುದ್ಧ 10 ಪ್ರಕರಣಗಳನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕಾರ್ಯಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪೆÇೀಲಿಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.