ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಚಿತ್ತಾಪುರ: ಏ.11:ಶಾಂತಿ, ಸಹಬಾಳ್ವೆ, ದಾನ-ಧರ್ಮದ ಪ್ರತೀಕವಾದ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಶುಕ್ರವಾರ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಆಚರಿಸಿದರು.
ಒಂದು ತಿಂಗಳ ಉಪವಾಸದ ಬಳಿಕ ಪಟ್ಟಣದ ಬಾಹರಪೇಟನ್ ಈದ್ಗಾ ಮೈದಾನ, ಚಿತ್ತವಲ್ಲಿ ಈದ್ಗಾ ಮೈದಾನ ಸೇರಿದಂತೆ ವಿವಿಧೆಡೆ ಶುಕ್ರವಾರ ಬೆಳಗ್ಗೆ 8.30ರಿಂದ 10.30ರವರೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆಯಲ್ಲಿ ಸಮಾಜದ ಹಿರಿಯರು ವಿವಿಧ ಸಂಘ-ಸಂಘಟನೆಗಳ ಅಧ್ಯಕ್ಷರು ವಿವಿಧ ಪಕ್ಷದ ಮುಖಂಡರು ಯುವಕರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.