ವಿಜಯಪುರ ಜಿಲ್ಲೆಯಾದ್ಯಂತ ಶ್ರದ್ಧೆ, ಭಕ್ತಿಯಿಂದ ರಮಜಾನ ಆಚರಣೆವಿವಿಧ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ
ವಿಜಯಪುರ,ಏ.11 :ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರಮಜಾನ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು.
ವಿಜಯಪುರ ನಗರದ ದಖನಿ ಈದ್ಗಾ ಮೈದಾನ, ಜುಮ್ಮಾ ಮಸೀದೆ ಮತ್ತಿತರ ಹಲವು ಕಡೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೆಳ್ಳಂಬೆಳಗ್ಗೆ ಮುಸ್ಲಿಂ ಬಾಂಧವರು ಎದ್ದು ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಹಾಕಿಕೊಂಡು ಈದ್ಗಾ ಮೈದಾನಕ್ಕೆ ತೆರಳಿ ಎಲ್ಲರೂ ಬಡವ ಬಲ್ಲಿದ ಎನ್ನದೇ ನೆಲದ ಹಾಸಿಗೆ ಮೇಲೆ ಸಾಲಾಗಿ ಕುಳಿತು ಅಲ್ಲಾಹುನಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸರ್ವರಿಗೂ ಶಾಂತಿ, ಸಮೃದ್ಧಿ ನೀಡಲಿ ಎಂದು ಅಲ್ಲಾಹುನಿಗೆ ಕೇಳಿಕೊಂಡರು. ಅನಂತರ ಎಲ್ಲರೂ ಭಾಯಿ ಭಾಯಿ ಎಂದು ಅಪ್ಪಿಕೊಂಡು ಪ್ರೀತಿ ವಿಶ್ವಾಸ ಮೆರೆದರು.
ಬಳಿಕ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಿಗೆ ತೆರಳಿ ಮನೆ ಮಂದಿಯನ್ನು ಬಿಗಿದಪ್ಪಿಕೊಂಡು ಪ್ರೀತಿ, ವಿಶ್ವಾಸ ವಿನಿಮಯ ಮಾಡಿಕೊಂಡರು.
ಮಹಿಳೆಯರು ಮನೆಯ ಪ್ರಾಂಗಣದಲ್ಲಿಯೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇದಾದ ನಂತರ ಮುಸ್ಲಿಂ ಬಾಂಧವರು ತಮಗೆ ಆತ್ಮೀಯರಾದ ಹಿಂದು ಬಾಂಧವರಿಗೆ ಮನೆಗೆ ಆಹ್ವಾನಿಸಿ ಸುರಕುಂಬ ಕುಡಿಸಿ ಬೋರಿ ಭೋಜನ ಮಾಡಿಸಿ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರಿದರು.